ಅ.17: ಮರ್ಹೂಂ ಖಾಝಿ ಬೇಕಲ್ ಉಸ್ತಾದರ ಜಿಲ್ಲಾ ಮಟ್ಟದ ಪ್ರಾರ್ಥನಾ ಮಜ್ಲಿಸ್
ಉಡುಪಿ: ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿದ್ದ ತಾಜುಲ್ ಫುಖಹಾಅ ಖಾಝಿ ಪಿ ಎಮ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉಸ್ತಾದರ ಹೆಸರಿನಲ್ಲಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ಜಿಲ್ಲಾ ಮಟ್ಟದ ಪ್ರಾರ್ಥನಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ ಅಕ್ಟೋಬರ್ 17 ಶನಿವಾರ ಬೆಳಿಗ್ಗೆ ಗಂಟೆ 10.30ಕ್ಕೆ ಮೂಳೂರು ಕೇಂದ್ರ ಮಸೀದಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾದಾತುಗಳು ಉನ್ನತ ವಿದ್ವಾಂಸರೂ ಹಾಗೂ ಇತರ ಗಣ್ಯರು ಭಾಗವಹಿಸಲಿರುವರು *ಬೇಕಲ್ ಉಸ್ತಾದರ ವಿಯೋಗದಿಂದ ತೆರವಾದ ಖಾಝಿ ಸ್ಥಾನಕ್ಕೆ ಉಲಮಾ ನಾಯಕರು ಹಾಗೂ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಉನ್ನತ ವಿದ್ವಾಂಸರನ್ನು ಅತೀ ಶೀಘ್ರದಲ್ಲಿ ಖಾಝಿ ಸ್ವೀಕಾರ ಮಾಡಲಾಗುವುದೆಂದು ಸಂಯುಕ್ತ ಜಮಾಅತ್ ನ ಸೆಕ್ರೇಟ್ರೀಯೇಟ್ ಸಭೆಯು ತೀರ್ಮಾನಿಸಿತು.
ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ರವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ತುರ್ತು ಸಭೆಯಲ್ಲಿ ಈ ತೀರ್ಮಾನವನ್ನು ಕೈ ಗೊಳ್ಳಲಾಯಿತು ಸಂಯುಕ್ತ ಜಮಾಅತ್ ನಾಯಕರಾದ ಬಿ ಎ ಇಸ್ಮಾಯಿಲ್ ಮದನಿ ಮಾವಿನಕಟ್ಟೆ,ಯು.ಕೆ.ಮುಸ್ತಫ ಸಅದಿ, ಅಶ್ರಫ್ ಸಖಾಫಿ ಕನ್ನಂಗಾರ್, ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಮೆಕ್ಕಾಸ್ , ಜಿಲ್ಲಾ ಕೋಶಾಧಿಕಾರಿ ಹಂಝ ಕರ್ಕಿ ಗುಲ್ವಾಡಿ,ಮೂಳೂರು ಕೇಂದ್ರ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು,ಅಶ್ರಫ್ ಅಂಜದಿ, ಪಿ.ಹೆಚ್ ಉಸ್ಮಾನ್ ಕೆರೆಬಳಿ,ಅಬ್ದುಲ್ ಹಮೀದ್ ಅದ್ದು, ಹಾಜಿ ಮೊಯ್ದಿನ್ ಗುಡ್ವಿಲ್,ನಾಸಿರ್ ಮೂಡುಗೋಪಾಡಿ,ವೈಬಿಸಿ ಬಾವ, ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಸ್ವಾಗತಿಸಿ ವಂದಿಸಿದರು.