ಮಲ್ಪೆ: ಸಾಲ ಮರು ಪಾವತಿಸಲಾಗದೆ ನೊಂದು, ಮೀನುಗಾರ ಆತ್ಮಹತ್ಯೆ
ಮಲ್ಪೆ:(ಉಡುಪಿ ಟೈಮ್ಸ್ ವರದಿ) ವಿಪರೀತ ಸಾಲ ಬಾಧೆಯಿಂದ ನೊಂದ ಮೀನುಗಾರರೊರ್ವರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮೀನುಗಾರ ಕೃಷ್ಣ ಕಾಂಚನ್ (42) ಸುಮಾರು 20 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದು, ಕಳೆದ 7-8 ತಿಂಗಳಿಂದ ಸಾಲದ ಹಣ ಮರು ಪಾವತಿಸಲಾಗದ ಕಾರಣ ನೊಂದಿದ್ದರು. ಇದೇ ವಿಚಾರವಾಗಿ ಇವರು ತಮ್ಮ ಹಳೆಯ ಮನೆಯಲ್ಲಿ ಪ್ಯಾನಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣ ಕಾಂಚನ್ ಹಣಕಾಸಿನ ವ್ಯವಹಾರದಲ್ಲಿನ ವಿಪರೀತ ನಷ್ಟವನ್ನು ಹೊಂದಿದ್ದು, ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ನವೀನ್ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.