ಇಸ್ರೇಲ್‌ನಲ್ಲಿ 40 ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು!

ಟೆಲ್ ಅವೀವ್: ಇಸ್ರೇಲ್- ಹಮಾಸ್ ಉಗ್ರರ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಮಾಸ್ ಉಗ್ರ ಸಂಘಟನೆ ಇಸ್ರೇಲ್‌ನಲ್ಲಿ ಕನಿಷ್ಠ 40 ಶಿಶುಗಳ ಹತ್ಯೆ ಮಾಡಿದೆ. 

ಸಂಘರ್ಷ ಸ್ಥಿತಿ ಹಿನ್ನೆಲೆಯಲ್ಲಿ ಇಸ್ರೇಲ್ ನ ಯೋಧರನ್ನು ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದ್ದು, ದೇಶದ ಎಲ್ಲಾ ಯೋಧರೂ ಶಸ್ತ್ರಸಜ್ಜಿತರಾಗಿ ಪ್ರತಿದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಯೋಧರಿಗೆ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡಿರುವ ದೃಶ್ಯಗಳು ಕಂಡುಬಂದಿವೆ, ಇನ್ನೂ ಕೆಲವೆಡೆ ಇಡೀ ಕುಟುಂಬಗಳನ್ನೇ ಹತ್ಯೆ ಮಾಡಲಾಗಿದೆ. 

ಕನಿಷ್ಟ 900 ಇಸ್ರೇಲ್ ಪ್ರಜೆಗಳು ಈ ಸಂಘರ್ಷದಲ್ಲಿ ಮೃತಪಟ್ಟಿದ್ದು, 2,616 ಮಂದಿ ಗಾಯಗೊಂಡಿದ್ದಾರೆ. ಅ.07 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!