ಚಂದಮಾಮ ಪತ್ರಿಕೆ ಖ್ಯಾತಿಯ ಕೆಸಿ ಶಿವಶಂಕರನ್ ವಿಧಿವಶ
ಬೆಂಗಳೂರು(ಉಡುಪಿ ಟೈಮ್ಸ್ ವರದಿ): ಮೊಬೈಲ್ ,ಕಂಪ್ಯೂಟರ್ ಗೇಮ್ ಇಲ್ಲದ ಬಾಲ್ಯ ಕಾಲದಲ್ಲಿ, ಮಕ್ಕಳನ್ನು ಓದಿನ ಮೂಲಕ ಮೋಡಿ ಮಾಡಿರುವುದೇ ಚಂದಮಾಮ ಕಥೆ ಪುಸ್ತಕ .
ರಾಜಾ ವಿಕ್ರಮನ ಸಾಹಸಗಳ ಮೂಲಕ ಬೆರಗಾಗುವ ಜಗತ್ತನ್ನು ತೆರೆದಿಡುತ್ತಿದ್ದ ಚಂದಮಾಮ ಕಲಾವಿದ ಶಂಕರ( ಕೆಸಿ ಶಿವಶಂಕರನ್) ಇನ್ನಿಲ್ಲ. ವಿಕ್ರಮ ಮತ್ತು ಬೇತಾಳನ ಕಥೆಗಳು ಕಥಾರೂಪಕಗಳಲ್ಲಿ ಸುಂದರವಾಗಿ ಕಣ್ಣು ಮುಂದೆ ತೇಲಿ ಬರುತ್ತಿತ್ತು. ಕಲಾವಿದ ಶಂಕರ್ ಅವರ ಅದ್ಭುತ ಚಿತ್ರಗಳು ನೇರವಾಗಿ ಮನಸ್ಸಿಗೆ ತಾಕುತ್ತಿದ್ದವು.
ಕೆಸಿ ಶಿವಶಂಕರನ್ 1924 ರಲ್ಲಿ ಈರೋಡ್‌ನಲ್ಲಿ ಜನಿಸಿದರು. ಅವರ ತಂದೆ ಶಿಕ್ಷಕರಾಗಿದ್ದರು. ಮದ್ರಾಸಿನ ಕಾರ್ಪೊರೇಷನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ ಶಂಕರ್ ಅವರ ಕೈಬರಹ ಅದ್ಭುತವಾಗಿತ್ತು. ಮುಂದೆ ಆ ಕೈಬರಹವೇ ಚಿತ್ರಕಾರರನ್ನಾಗಿ ಮಾಡಿತ್ತು.
1952ರ ವೇಳೆಗೆ ಮಾಸಿಕ ಕೇವಲ 350 ರೂಪಾಯಿ ಸಂಬಳಕ್ಕೆ ಚಂದಮಾಮ ಮಾಸಿಕ ಪತ್ರಿಕೆ ಸೇರಿಕೊಂಡು ತಮ್ಮ ಭವಿಷ್ಯ ರೂಪಸಿಕೊಂಡರು.