ಧರ್ಮಪ್ರಾಂತ್ಯ ಮಟ್ಟದ ಪಂದ್ಯಾಟ- ಕೊಳಲಗಿರಿ, ಉಡುಪಿ ಚಾಂಪಿಯನ್
ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚಿನ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪಂದ್ಯಾಟದಲ್ಲಿ ತ್ರೋಬಾಲ್ ನಲ್ಲಿ ಶೋಕಮಾತ ಚರ್ಚ್ ಉಡುಪಿ ಹಾಗೂ ಕ್ರಿಕೆಟ್ ನಲ್ಲಿ ಸೇಕ್ರೇಡ್ ಹಾರ್ಟ್ ಚರ್ಚ್ ಕೊಳಲಗಿರಿ ಚಾಂಪಿಯನ್ ಶಿಪ್ ನ್ನು ತನ್ನದಾಗಿಸಿಕೊಂಡವು.
ಭಾನುವಾರ ಕಟಪಾಡಿ ಎಸ್ ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಜರುಗಿದ ಪಂದ್ಯಾಟದ ತ್ರೋಬಾಲ್‌ನಲ್ಲಿ ರನ್ನರ್ ಅಪ್ ಆಗಿ ಸಂತ ಮರಿಯಾ ಗೊರೆಟ್ಟಿ ಚರ್ಚ್ ಹಿರ್ಗಾನ ಹಾಗೂ ಕ್ರಿಕೆಟ್ ನಲ್ಲಿ ಸಂತ ಝೇವಿಯರ್ ಚರ್ಚ್ ಉದ್ಯಾವರ ತಂಡ ಆಯ್ಕೆಯಾದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೋನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಬಹುಮಾನ ವಿತರಿಸಿ ಮಾತನಾಡಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕಟಪಾಡಿ ಚರ್ಚ್ ತನ್ನ ಧರ್ಮಪ್ರಾಂತ್ಯದ ಎಲ್ಲಾ ಕ್ರೀಡಾಳುಗಳನ್ನು ಈ ಪಂದ್ಯಾಟದ ಮೂಲಕ ಒಗ್ಗೂಡಿಸುವ ಪ್ರಯತ್ನ ಮಾಡಿರುವುದು ಶ್ಲಾಘನಾರ್ಹ ಸಂಗತಿಯಾಗಿದೆ. ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ,ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ. ಉತ್ತಮ ಕ್ರೀಡಾಪಟುಗಳಾಗಿಸಮಾಜದಲ್ಲಿ ಉತ್ತಮ ಹೆಸರು ಗಳಿಸುವಂತಾಗಬೇಕು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಗಳಿಂದ ಸಾಕಷ್ಟು ಅನುಕೂಲಗಳಿವೆ. ಯಾವುದಕ್ಕೂ ಅಂಜದೆ ಮುನ್ನುಗ್ಗಿದರೆ ಯಶಸ್ಸು ನಿಮ್ಮ ಹಿಂದೆ ಇರುತ್ತದೆ. ಕ್ರೀಡೆಗಳಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಉಡುಪಿ ಧರ್ಮಪ್ರಾಂಥ್ಯದ ಕುಲಪತಿ ವಂ|ಡಾ|ರೋಶನ್ ಡಿಸೋಜಾ ಮಾತನಾಡಿ ಅತ್ಯುತ್ತಮವಾಗಿ ಪಂದ್ಯಾಟವನ್ನು ಸಂಘಟಿಸಿದ ಸಂಘಟಕರ ಪ್ರಯತ್ನವನ್ನು ಶ್ಲಾಘಿಸಿದರು.
ಹೊಲಿ ಕ್ರೋಸ್ ಸ್ಟೂಡೆಂಟ್ಸ್ ಹೋಮ್ ಇದರ ನಿರ್ದೇಶಕರಾದ ವಂ | ರೋನ್ಸನ್ ಡಿಸೋಜಾ, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಕಟಪಾಡಿ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಚರ್ಚಿನ ಧರ್ಮಗುರು ವಂ ವಂ| ರಾಜೇಶ್ ಪಸನ್ನ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಯೋಜಕರಾದ ಲೂಯಿಸ್ ಡಿಸಿಲ್ವಾ, ಪಂದ್ಯಾಟದ ಸಂಚಾಲಕ ಕಿರಣ್ ಲೂವಿಸ್ ಉಪಸ್ಥಿತರಿದ್ದರು.
ಅನಿತಾ ಆಳ್ವ ಸ್ವಾಗತಿಸಿ, ವಿಲ್ಫ್ರೇಡ್ ಲೂವಿಸ್ ಧನ್ಯವಾದವಿತ್ತರು. ಫ್ರೀಡಾ ಪಿಂಟೊ ವಿಜೇತರ ಪಟ್ಟಿಯನ್ನು ವಾಚಿಸಿದರು.