ಮಣಿಪಾಲ: ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ- ನಾಲ್ವರ ಬಂಧನ
ಮಣಿಪಾಲ: ಶಿಂಬ್ರ ಬ್ರಿಡ್ಜ್ ಬಳಿ ಹೊಡೆದಾಟದಲ್ಲಿ ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟ್ಪಾಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ ಬಂಧಿತ ಆರೋಪಿಗಳು. ಚೂರಿ ಇರಿತಕ್ಕೆ ಒಳಗಾದ ಪ್ರತಾಪ್ (19) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಾಪ್, ತಿಲಕ್ ಮತ್ತು ಹರ್ಷಿತ್ ಎಂಬವರು ಮಣಿಪಾಲ ಶಿಂಬ್ರಾ ಬಳಿಯ ಬಾಬಾ ಪಾಯಿಂಟ್ ಹೋಟೆಲ್ ಬಳಿ ರಾತ್ರಿ ತಿರುಗಾಡಲು ಹೋಗಿದ್ದು, ಅಲ್ಲಿ ಮೂರು ಜನರು ಇತರರೊಂದಿಗೆ ಸೇರಿ ಗಲಾಟೆ ಮಾಡುತ್ತಿದ್ದರು. ಇದನ್ನು ಪ್ರತಾಪ್ ಪ್ರಶ್ನಿಸಿದ್ದು, ಆಗ ಆರೋಪಿಗಳು ಪ್ರತಾಪ್‌ಗೆ ಹೊಡೆದು ದೂಡಿದ್ದಾರೆಂದು ದೂರಲಾಗಿದೆ.
ಪ್ರತಿದೂರು ದಾಖಲು:- ಇದೇ ಪ್ರಕರಣಕ್ಕೆ ಸಂಬಂಧಿಸಿ ಉದಾಫ್‌ಗೆ ನಾಲ್ವರಿದ್ದ ತಂಡವೂ ನನಗೆ ಮುಖಕ್ಕೆ ಕೈಯಿಂದ ಹೊಡೆದು ಬಳಿಕ ಕಲ್ಲು ಎಸೆದು ಕೊಲೆಗೆ ಯತ್ನಿಸಿದ ಬಗ್ಗೆ ಪ್ರತಿದೂರು ನೀಡಿದ್ದಾರೆ.
ಹರ್ಷಿತ್, ಬೈಕಾಡಿ, ತಿಲಕ್, ಬೈಕಾಡಿ ಮತ್ತು ರಿತೇಷ್, ಬೈಕಾಡಿ ಎಂಬವರನ್ನು ಬಂಧಿಸಿಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.