ಸಲಹೆ, ಸೂಚನೆ ಹಾಗೂ ಚಿಕಿತ್ಸೆಗೆ ಇ-ಸಂಜೀವಿನಿ ಆ್ಯಪ್ ಬಳಸಿ: ಕೋಟಾ ಶ್ರೀನಿವಾಸ

ಮಂಗಳೂರು ಸೆ.29: ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ವೈದ್ಯರಿಂದ ಸಲಹೆ ಪಡೆಯಲು ಸರ್ಕಾರ ಇ-ಸಂಜೀವಿನಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.


 ಮಂಗಳೂರು ಜಿಲ್ಲೆಯಲ್ಲಿ 24 ತಜ್ಞ ವೈದ್ಯರು ಈಗಾಗಲೇ ಆ್ಯಪ್ ನಲ್ಲಿ ಸೇವೆ ನೀಡುತ್ತಿದ್ದಾರೆ. ಹೊರೆ ಜಿಲ್ಲೆಯ 100ಕ್ಕೂ ಅಧಿಕ ರೋಗಿಗಳಿಗೆ ವಿಡೀಯೊ ಮೂಲಕ ಸಂಪರ್ಕಿಸಿ ಚಿಕಿತ್ಸೆ ನೀಡಲಾಗಿದೆ. ಈ ಆ್ಯಪ್‍ನಲ್ಲಿ ಕರ್ನಾಟಕದಲ್ಲಿ ಇರುವ ಉತ್ತಮ ವೈದ್ಯ ತಂಡವು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಯಾವುದೇ ಜಿಲ್ಲೆಯಲ್ಲಿ ಇವರು ವೈದ್ಯರನ್ನು ರೋಗಿ ಸಂಪರ್ಕಿಸಬಹುದಾಗಿದೆ.

ವೈದ್ಯರನ್ನು ಸಂಪರ್ಕಿಸಲು ಮೊಬೈಲ್‍ನ ಪ್ಲೇ ಸ್ಟೋರ್ನಲ್ಲಿ ಇ-ಸಂಜೀವಿನಿ ಒ.ಪಿ.ಡಿ. ಎಂಬ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಅಥವಾ ಗೂಗಲ್ನಲ್ಲಿ ಇ-ಸಂಜೀವಿನಿ ಒ.ಪಿ.ಡಿ. ಎಂದು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ವೆಬ್ ವಿಡಿಯೊ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರಿಗೆ ಆರೋಗ್ಯ ಸಮಸ್ಯೆ ಕುರಿತು ವಿವರಿಸಿದರೆ ಚಿಕಿತ್ಸೆ ಬರೆದು ಕೊಡಲಿದ್ದಾರೆ. ಕೋವಿಡೇತರ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಸಹಕಾರಿಯಾಗಲ್ಲಿದೆ.


 ಆ್ಯಪ್‍ನಲ್ಲಿ ರೋಗಿಯ ರಿಜಿಸ್ಟ್ರೇಷನ್ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ನಮೂದಿಸಿದರೆ, ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ದೊರೆಯಲಿದೆ. ಟೋಕನ್ ನಂಬರ್ ನೀಡಿ, ವೈದ್ಯರನ್ನು ವಿಡಿಯೊ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆ ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತದೆ.

ಒಮ್ಮೆ ನೋಂದಣಿಯಾದರೆ ಮತ್ತೊಮ್ಮೆ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ.
ಸಾರ್ವಜನಿಕರು ಆರೋಗ್ಯ ದೃಷ್ಠಿಯಿಂದ ಸರ್ಕಾರ ಉತ್ತಮ ಚಿಕಿತ್ಸೆಯನ್ನು ಬೆರಳ ತುದಿಯಲ್ಲಿಯೇ ಸುಲಭವಾಗಿ ಪಡೆಯಬೇಕು ಎಂಬ ಉದ್ದೇಶದಿಂದ ಇ-ಸಂಜೀವಿನಿ ಆ್ಯಪ್ ಮೂಲಕ ಅನ್‍ಲೈನ್‍ನಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!