ಮಣಿಪಾಲ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ: ನಾಲ್ವರ ಬಂಧನ

ಬೆಂಗಳೂರು: ಆನ್ಲೈನ್ ನಲ್ಲಿ ಡ್ರಗ್ಸ್ ಖರೀದಿಸಿ ಉಡುಪಿ ಹಾಗೂ ಚೆನ್ನೈನಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ಕೆ. ಪ್ರಮೋದ್, ಫಾಹಿಮ್, ಕರ್ನಾಟಕದ ಎ.ಬಶೀರ್ ಹಾಗೂ ಎಸ್‌.ಎಸ್‌. ಶೆಟ್ಟಿನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅವರು ಸಾಗಿಸುತ್ತಿದ್ದ 750 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಲಾಗಿದೆ.

‘ರಾಷ್ಟ್ರೀಯ ಮಾದಕ ವಸ್ತುಗಳ ನಿಯಂತ್ರಣ ದಳದ ಅಧಿಕಾರಿಗಳು ಜುಲೈನಲ್ಲಿ ಕಾರ್ಯಾಚರಣೆ ನಡೆಸಿ ಅಂಚೆ ಕಚೇರಿಗಳಲ್ಲಿ ಪಾರ್ಸೆಲ್ ಹೋಗುತ್ತಿದ್ದ ಡ್ರಗ್ಸ್ ಜಪ್ತಿ ಮಾಡಿದ್ದರು. ಡ್ರಗ್ಸ್ ಯಾರು ತರಿಸಿದ್ದರು ಎಂಬುದು ಆರಂಭದಲ್ಲಿ ಗೊತ್ತಿರಲಿಲ್ಲ. ಅದರ ಹೆಚ್ಚಿನ ತನಿಖೆ ಕೈಗೊಂಡಾಗಲೇ ಈ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.’

‘ಎರಡು ವರ್ಷಗಳಿಂದ ಈ ಗ್ಯಾಂಗ್ ಡ್ರಗ್ಸ್ ಮಾರಾಟ ಮಾಡುತ್ತಿತ್ತು. ಉಡುಪಿಯ ಮಣಿಪಾಲ್ ವಿಶ್ವವಿದ್ಯಾಲಯ, ಎನ್‌ಎಂಎಎಂಐಟಿ ಕಾಲೇಜು, ಮಣಿಪಾಲ್ ಕ್ಲಬ್‌ಗಳು, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಡ್ರಗ್ಸ್  ಮಾರುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!