ಉದ್ಯಾವರ ಜಯಲಕ್ಷ್ಮಿ ಸಿಲ್ಕ್ಸ್ ನ ಸಾಮಾಜಿಕ ಕಳಕಳಿಗೆ ಜನರ ಮೆಚ್ಚುಗೆ

ಉಡುಪಿ : ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಾವಳಿಯಿಂದ ತಪ್ಪಿಸಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದಿನಗೂಲಿ ನೌಕರರು ಮತ್ತು ಪ್ರಮುಖ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಸರಕಾರವು ಪ್ರಸ್ತುತ ಲಾಕ್ ಡೌನ್ ಕಾನೂನನ್ನು ಸ್ವಲ್ಪ ಸಡಿಲಗೊಳಿಸಿ ರುವುದರಿಂದ ಹಲವಾರು ಪ್ರಮುಖ ಕಂಪೆನಿಗಳು ತಮ್ಮ ಉದ್ಯಮಗಳನ್ನು ನಿಧಾನವಾಗಿ ಆರಂಭಿಸುತ್ತಿವೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಗ್ರಾಹಕರನ್ನು ಸೆಳೆಯಲು ಹರಸಾಹಸ ಮಾಡುತ್ತಿವೆ. ಜವಳಿ ಉದ್ಯಮದಲ್ಲಿ ಗ್ರಾಹಕರ ಮನ ಗೆದ್ದಿರುವ ಕರಾವಳಿಯ ಪ್ರಮುಖ ಜವಳಿ ಸಂಸ್ಥೆ ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರ ಗ್ರಾಹಕರ ಸೇವೆಗೆ ಸಿದ್ಧಗೊಂಡಿದ್ದು, ಜೊತೆಗೆ ಕೊರೋನಾ ಮಹಾಮಾರಿಯಿಂದ ಗ್ರಾಹಕರನ್ನು ಮತ್ತು ಸಾರ್ವಜನಿಕರನ್ನು ರಕ್ಷಿಸಿಕೊಳ್ಳಲು ವಿಶಿಷ್ಟ ರೀತಿಯಲ್ಲಿ ಮಾಸ್ಕ್ ವಿತರಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

50 ವರ್ಷದ ಇತಿಹಾಸ ಹೊಂದಿರುವ ರಾಜ್ಯದ ಪ್ರಮುಖ ಮತ್ತು ಕರಾವಳಿ ಭಾಗದ ಶ್ರೇಷ್ಠ ಜವಳಿ ಸಂಸ್ಥೆ ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರ ತನ್ನ ಉದ್ಯಮದ ಜೊತೆಗೆ ಈ ಕಷ್ಟ ಕಾಲದಲ್ಲಿ ಗ್ರಾಹಕರಿಗೆ ಮತ್ತು  ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜಯಲಕ್ಷ್ಮಿ ಸಿಲ್ಕ್ಸ್ ಉದ್ಯೋಗಿಗಳಿಗೆ ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ಪ್ರತಿ ಮಂಗಳವಾರ ವಿತರಿಸಿತ್ತು. ಜೊತೆಗೆ ಉದ್ಯಾವರದ ಆಟೋರಿಕ್ಷಾ ಚಾಲಕ ಮಾಲಕ ಸಂಸ್ಥೆಗೆ ಮತ್ತು ಕಷ್ಟದಲ್ಲಿರುವವರಿಗೆ ಅಕ್ಕಿ ಸಹಿತ ದಿನಸಿ ವಸ್ತುಗಳನ್ನು ವಿತರಿಸಿತ್ತು. ನಾಲ್ಕನೇ ಹಂತದ ಲಾಕ್ ಡೌನ್ ಅನ್ನು ಸರಕಾರ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದ್ದರಿಂದ, ಸರಕಾರ ರೂಪಿಸಿದ ಕಾನೂನನ್ನು ಪಾಲನೆ ಮಾಡಿಕೊಂಡು ಜಯಲಕ್ಷ್ಮಿ ಸಿಲ್ಕ್ಸ್ ಗ್ರಾಹಕರಿಗೆ ತನ್ನ ಕೊಡುಗೆಯನ್ನು ನೀಡಲು ಸಿದ್ಧಗೊಂಡಿದೆ. ಕೋರನ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ, ಸಂಘ ಸಂಸ್ಥೆಗಳಿಗೆ ಮಾಸ್ಕ್ಗಳನ್ನು ಈಗಾಗಲೇ ವಿತರಿಸುತ್ತಿದೆ.


ಜಯಲಕ್ಷ್ಮಿ ಸಿಲ್ಕ್ಸ್ ಉದ್ಯಾವರ ಜವಳಿ ಮಳಿಗೆಯಲ್ಲಿ ಖರೀದಿ ಮಾಡಿದ ಪ್ರತಿ ಗ್ರಾಹಕನಿಗೆ ಅತ್ಯುತ್ತಮ ಗುಣಮಟ್ಟದ 100% ಕಾಟನ್ ಮಾಸ್ಕ್ ಗಳನ್ನು ಉಚಿತವಾಗಿ ನೀಡುತ್ತಿದೆ. ಅದರಲ್ಲೂ  ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಮದುವೆ ಸಹಿತ ಶುಭ ಸಮಾರಂಭಗಳನ್ನು ನಡೆಸುವ ಗ್ರಾಹಕರಿಗೆ 50 ಕ್ಕೂ ಅಧಿಕ ಉಚಿತ ಮಾಸ್ಕ್ ಗಳನ್ನು ವಿತರಿಸುದರ ಜೊತೆಗೆ, ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ. ಕೋರೋನ ವಿರುದ್ಧ ಹೋರಾಡೋಣ, ರೋಗ ಹರಡದಂತೆ ಎಲ್ಲರೂ ಜಾಗೃತಿ ವಹಿಸೋಣ ಎಂಬ ವಿವಿಧ ಮಾಹಿತಿ ಇರುವವ ಕರಪತ್ರವನ್ನು ವಿತರಿಸಲಾಗುತ್ತಿದೆ. 25 ಸಾವಿರ ಮಾಸ್ಕ್ಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ ಸಾವಿರಕ್ಕೂ ಅಧಿಕ ಮಾಸ್ಕ್ ಗಳನ್ನು ವಿತರಿಸಲಾಗಿದೆ. ಉದ್ಯಾವರದ ಆಸುಪಾಸಿನ ಆಟೋರಿಕ್ಷಾ ಚಾಲಕರಿಗೆ, ಎಸ್ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ, ಕಟಪಾಡಿ ಮತ್ತು ಕಾಪು ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ, ಅಗ್ನಿಶಾಮಕ ಸಿಬ್ಬಂದಿಗಳಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಈಗಾಗಲೇ ಮಾಸ್ಕ್ ಗಳನ್ನು ತಲುಪಿಸಲಾಗಿದೆ.

ಲಾಕ್ ಡೌನ್ ಸಮಯದಲ್ಲಿ ಟೈಲರ್ ಗಳು ಬಹಳಷ್ಟು ಸಂಕಷ್ಟವನ್ನು ಅನುಭವಿಸಿದ್ದರು. ಅವರಿಗೆ ಉದ್ಯಮವನ್ನು ನೀಡುವುದಕ್ಕಾಗಿ ಮತ್ತು ನಮ್ಮ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಕೊರೋನಾ ಮಹಾಮಾರಿಯಿಂದ ಸಂರಕ್ಷಿಸಿಕೊಳ್ಳಲು ಉತ್ತಮ ಗುಣಮಟ್ಟದ ಕಾಟನ್ ಮಾಸ್ಕ್ ಅನ್ನು ತಯಾರಿಸಿ ವಿತರಣೆ ಮಾಡುತ್ತಿದ್ದೇವೆ. ಜೊತೆಗೆ ಜಾಗೃತಿ ನೀಡುವ ಕರಪತ್ರಗಳನ್ನು ವಿತರಿಸಿದ್ದೇವೆ ಎಂದು ಜಯಲಕ್ಷ್ಮಿ ಸಿಲ್ಕ್ಸ್ ಪಾಲುದಾರರ ಆಪ್ತರಾಗಿರುವ ಯೋಗೀಶ್ ಕೋಟ್ಯಾನ್ “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!