ಉಡುಪಿಯಲ್ಲಿ ಅ.28-29 ರಂದು ವಿಶ್ವ ಬಂಟರ ಸಮ್ಮೇಳನ- ಪೂರ್ವಭಾವಿ ಸಭೆ
ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ, ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಅಕ್ಟೋಬರ್ 28ರಂದು “ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆ”ಯಲ್ಲಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾ ಕೂಟ” ಮತ್ತು 29 ರಂದು “ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆ”ಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮಗಳ ಕುರಿತ 6ನೇ ಪೂರ್ವಭಾವಿ ಸಭೆಯು ಇಂದು ಸಂಜೆ 5 ಗಂಟೆಗೆ ಉಡುಪಿಯ ಓಷನ್ ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು, ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ, ಕ್ರೀಡಾ ಸಮಿತಿಯ ಸಹಸಂಚಾಲಕರಾದ ರೋಷನ್ ಕುಮಾರ್ ಶೆಟ್ಟಿ ಹಾಗೂ ಇತರ ಸಮಿತಿಗಳ ಎಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರು ಉಪಸ್ಥಿತರಿದ್ದರು.
ಸಭೆಯಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಸಲಿರುವ ಕಾರ್ಯಕ್ರಮಗಳ ತಯಾರಿಯ ಕುರಿತು ಚರ್ಚಿಸಲಾಯಿತು.ಸಮಿತಿಗಳ ಸಂಚಾಲಕರು ಹಾಗೂ ಸಹಸಂಚಾಲಕರು ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಅವರವರ ಅಭಿಪ್ರಾಯವನ್ನು ವಿನಿಯೋಗ ಮಾಡಿಕೊಂಡರು. ಸಭೆಯ ಕೊನೆಯಲ್ಲಿ ವಿಶ್ವ ಬಂಟರ ಸಮ್ಮೇಳನ ಜರಗಲಿರುವ ಉಡುಪಿಯ ಅಜ್ಜರಕಾಡು ಮೈದಾನದ ಸ್ಥಳ ವೀಕ್ಷಣೆ ಮಾಡಲಾಯಿತು.