ಮಲ್ಪೆ: ಮಲಗಿದ್ದಲ್ಲೇ ಬಾಲಕಿ ಮೃತ್ಯು

ಮಲ್ಪೆ, ಸೆ.27: ನರ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಸೆ.26ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ದಾಮೋದರ್ ಎಂಬವರ ಮಗಳು ದೃಶ್ಯ (12)ಎಂದು ಗುರುತಿಸಲಾಗಿದೆ. ಔಷದಿ ತೆಗೆದುಕೊಂಡು ಮಲಗಿದ್ದ ದೃಶ್ಯ ಬೆಳಗ್ಗೆ ಎಬ್ಬಿಸಿದಾಗ ಮಾತನಾಡದೇ ಇದ್ದದ್ದು ಕಂಡು, ಕೂಡಲೇ ಆಕೆಯನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!