ಉಡುಪಿ: ಅಕ್ರಮ ಗಣಿಗಾರಿಕೆ ಎಸ್ಪಿ ಕಾರ್ಯಕ್ಕೆ ದಸಂಸ ಬೆಂಬಲ

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಕುಮಾರ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ತಿಳಿಸಿದರು.

ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಅಕ್ರಮ ಮರಳು ದಂಧೆ, ಅಕ್ರಮ ಕಲ್ಲುಕೋರೆ, ಅಕ್ರಮ ಇಸ್ಪೀಟ್ ಕ್ಲಬ್ ಗಳು ಕಾರ್ಯಾಚರಿಸುತ್ತಿದ್ದು ಇದನ್ನು ರಾಜಕಾರಣೀಗಳ ಕ್ರಪಾಕಟಾಕ್ಷದಿಂದಲೇ, ಅವರ ಚೇಲಾಗಳೇ ನಡೆಸುತ್ತಿದ್ದಾರೆ. ನ್ಯಾಯಯುತವಾಗಿ ಸರಕಾರಕ್ಕೆ ಸಲ್ಲಬೇಕಾಗಿದ್ದ ಕೋಟ್ಯಂತರ ರೂಪಾಯಿ ರಾಜಧನವನ್ನು ಸರಕಾರಕ್ಕೆ ವಂಚಿಸಿ ಹಲವಾರು ಬಂಡವಾಳ ಶಾಹಿ ಕುಳಗಳು ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸುತ್ತಿದ್ದರು.

ಈ ಹೊಸ ಪೋಲಿಸ್ ವರಿಷ್ಠಾಧಿಕಾರಿಯವರು ಉಡುಪಿಗೆ ವರ್ಗಾವಣೆಯಾಗಿ ಬಂದ ನಂತರ ಈ ಅಕ್ರಮ ಚಟುವಟಿಕೆಗಳಿಗೆ ಸ್ವಲ್ಪ ಮಟ್ಟಿನ ಅಡಚಣೆಯಾಗಿದೆ. ಆದ್ದರಿಂದ ಈ ಬಂಡವಾಳಶಾಹಿ ಮುಷ್ಕರಕ್ಕೆ ಸೊಪ್ಪು ಹಾಕದೆ ತಾವು ತಮ್ಮ ಪ್ರಾಮಾಣಿಕ ಕರ್ತವ್ಯವನ್ನು ಉಡುಪಿ ಜಿಲ್ಲೆಯಲ್ಲೂ ಮುಂದುವರಿಸ ಬೇಕು ಎಂದರು.

ಈಗಾಗಲೇ ಪೋಲಿಸ್ ವರಿಷ್ಠಾಧಿಕಾರಿಯವರು ಘೋಷಿಸಿದಂತೆ ಅಧಿಕ್ರತವಾದ ಮತ್ತು ಕಾನೂನಿನ ಪರಿಧಿಯೊಳಗೆ ಕಾರ್ಯಾಚರಿಸುತ್ತಿರುವ ಯಾವುದೇ ಚಟುವಟಿಕೆಗಳಿಗೆ ತಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ತಿಸಿದ್ದಾರೆ. ಇಂದಿನ ಈ ಉಡುಪಿ ಜಿಲ್ಲೆಯ ಮುಷ್ಕರವನ್ನು ಗಮನಿಸಿದಾಗ ಇದು ಶ್ರೀಮಂತ ವಾಹನ ಮಾಲಿಕರ ಮುಷ್ಕರದಂತೆ ಕಂಡು ಬಂತು. ಯಾವುದೇ ತಲಮಟ್ಟದ ಕೂಲಿ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿಲ್ಲ. ಕೇವಲ ಟಿಪ್ಪರ್ ಮಾಲಿಕರು ತಮ್ಮ ತಮ್ಮ ಡ್ರೈವರ್ ಗಳಿಗೆ ಹೇಳಿ ಟಿಪ್ಪರ್ ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಂತೆ ಭಾಸವಾಗುತ್ತಿದೆ. ಆದ್ದರಿಂದ ಈ ಬಂಡವಾಳಶಾಹಿಗಳ ಒತ್ತಡಕ್ಕೆ, ಬ್ಲಾಕ್ಮೇಲ್ ತಂತ್ರಕ್ಕೆ, ರಾಜಕಾರಣಿಗಳ ಧಮ್ಕಿಗೆ ಮಣಿಯಬಾರದು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ ಬಾಳ್ಕುದ್ರು, ಅಣ್ಣಪ್ಪ ನಕ್ರೆ, ಶ್ಯಾಮಸುಂದರ ತೆಕ್ಕಟ್ಟೆ, ಶ್ರೀಧರ ಕುಂಜಿಬೆಟ್ಟು, ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ , ಶ್ರೀನಿವಾಸ ವಡ್ಡರ್ಸೆ, ನಾಗರಾಜ, ದೇವು ಹೆಬ್ರಿ, ವಿಠಲ ಉಚ್ಚಿಲ, ರಾಘವ ಕುಕುಜೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!