ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ- ತನಿಖೆಗೆ ನಿರ್ಣಯ
ಬ್ರಹ್ಮಾವರ: ದ.ಕ. ಸಹಕಾರಿ ಸಕ್ಕರೆಯ ಗುಜರಿ ಮಾರಾಟದಲ್ಲಿ ಕೋಟ್ಯಾಂತರ ರೂ.ಅವ್ಯವಹಾರದ ಆಗಿದೆನ್ನುವ ಕುರಿತು ಇಲಾಖಾ ತನಿಖೆ ನಡೆಸಲು ಸೋಮವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಖಾನೆಯ ಮಾಜಿ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಿಯಮಗಳನ್ನು ಅನುಸರಿಸಿಲ್ಲ, ಇದರಿಂದಾಗಿ ಕಾರ್ಖಾನೆಗೆ ಕೋಟ್ಯಂತರ ರೂ. ನಷ್ಟವಾಗಿದೆ. ಕಾರ್ಖಾನೆ ನಷ್ಟವಾಗಿ, ರೈತರಿಗೆ ಹಣ ನೀಡದೇ ಇದ್ದಾಗಲೂ ನಾವು ಒಂದು ರೂಪಾಯಿಯನ್ನೂ ಕೇಳಿಲ್ಲ. ಆದರೆ ರೈತರ ಆಸ್ತಿಯಾಗಿರುವ ಕಾರ್ಖಾನೆಯ ಮಾರಾಟದಲ್ಲಿ ಅವ್ಯವಹಾರ ಮಾಡಿರುವುದನ್ನು ಕ್ಷಮಿಸುವುದಿಲ್ಲ. ಈಎಂದಿಗೂ ಕಾರಣಕ್ಕಾಗಿ ರೈತ ಸಂಘ ಹೋರಾಟನಡೆಸುತ್ತಿದೆ. ಕಾರ್ಖಾನೆಯ ಎಂ.ಡಿ ಅವರಿಂದಲೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ಆಗಬೇಕು. ನಷ್ಟವಾಗಿರುವ 71.75 ಕೋಟಿಯನ್ನು ಅವರಿಂದ ವಸೂಲು ಮಾಡಬೇಕು’ ಎಂದು ಆಗ್ರಹಿಸಿದರು.
ಸಾಗಾಟ ಮಾಡಲಾದ ಇ-ವೇ ಬಿಲ್‌ಗಳು 85 ಇವೆ. ಆದರೆ ಇಲ್ಲಿ 46 ಇನ್‌ವಾಯ್ಸ್ಗಳನ್ನು ಮಾತ್ರ ತೆಗೆಯಲಾಗಿದೆ. ಕಾರ್ಖಾನೆಯಲ್ಲಿ ಗೇಟ್ ಪಾಸ್ ಇಲ್ಲ. ಕಾರ್ಖಾನೆಯಿಂದ ವೇ ಬಿಲ್ ಜಾರಿ ಮಾಡಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ಇದೆ ಎಂದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ‘ಇ-ವೇ ಬಿಲ್ 24 ಗಂಟೆವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಾಗಾಟಗಾರರು 24 ಗಂಟೆಗಳ ತರುವಾಯ ಇನ್ನೊಂದು ವೇ ಬಿಲ್ ತಯಾರಿಸಿರುತ್ತಾರೆ. ಆದರೆ ನಮ್ಮಲ್ಲಿಂದ 46 ಲೋಡ್ ಮಾತ್ರ ಹೊರಹೋಗಿವೆ’ ಎಂದು ಸ್ಪಷ್ಟಪಡಿಸಿ, ಈ ಬಗ್ಗೆ ಯಾವ ತನಿಖೆಗೂ ಸಿದ್ಧ ಎಂದರು.
ಆಡಿಟ್‌ಗೆ ಆಗ್ರಹ: ಆಡಿಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಪ್ರಸಾದ್ ಶೆಟ್ಟಿ, ‘ಲೆಕ್ಕ ಪರಿಶೋಧಕರು ಕೊನೆ ಹಂತದಲ್ಲಿ ಅನಾರೋಗ್ಯದ ನೆಪವೊಡ್ಡಿ ರಾಜೀನಾಮೆ ನೀಡಿದ್ದಾರೆ. ಕಾರಣದಿಂದ ಪ್ರಸಕ್ತ ಸಭೆಯಲ್ಲಿ ಆಡಿಟ್ ರಿಪೋರ್ಟ್‌ನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು 2 ವರ್ಷಗಳ ಲೆಕ್ಕಪತ್ರಗಳನ್ನು ಸರ್ಕಾರದಿಂದ ಲೆಕ್ಕಪರಿಶೋಧನೆ ನಡೆಸುವಂತೆ ನಿರ್ಣಯ ಕೈಗೊಳ್ಳಲು ಆಗ್ರಹಿಸಿದರು. ಆಡಳಿತ ಮಂಡಳಿ ಸದಸ್ಯರು ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎಚ್ ಎನ್. ರಮೇಶ್ ಇದ್ದರು.