ಉಡುಪಿ ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

ಉಡುಪಿ: ಇಂದು ನಡೆದ ಉಡುಪಿ ಬಾರ್ ಅಸೋಸಿಯೇಷನ್‌ (ವಕೀಲರ ಸಂಘ)ನ ಚುನಾವಣೆಯಲ್ಲಿ ನೂತನ ಹಿರಿಯ ನ್ಯಾಯವಾದಿ ರೆನೋಲ್ಡ್ ಪ್ರವೀಣ್ ಕುಮಾರ್ ಅತ್ಯಧಿಕ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಜಿಲ್ಲಾ ವಕೀಲರ ಸಂಘದ 2023-25ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಎ.ಆರ್. ಚುನಾಯಿತರಾಗಿರುತ್ತಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರೆನೋಲ್ಡ್ ಪ್ರವೀಣ್ ಕುಮಾರ್ ಇವರು ವಿವಿಧ ಅವಧಿಗಳಲ್ಲಿ 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 659 ಮತಗಳ ಪೈಕಿ 444 ಮತಗಳನ್ನು ಪಡೆದು, ತನ್ನ ಪ್ರತಿಸ್ಪರ್ಧಿ ವಾಣಿ ವಿ. ರಾವ್ ಅವರನ್ನು 219 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ.

ಚುನಾಯಿತರಾದ ಇತರ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:

ಉಪಾಧ್ಯಕ್ಷ: ಮಿತ್ರ ಕುಮಾರ್ ಶೆಟ್ಟಿ, ಜಂಟಿಕಾರ್ಯದರ್ಶಿ : ರವೀಂದ್ರ ಬೈಲೂರು, ಖಜಾಂಚಿ : ಗಂಗಾಧರ ಎಚ್.ಎಮ್., ಸಾಂಸ್ಕೃತಿಕ ಕಾರ್ಯದರ್ಶಿ: ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ: ಸುಮಿತ್ ಹೆಗ್ಡೆ,

ಕಾರ್ಯಕಾರಿ ಸಮಿತಿ ಸದಸ್ಯರು : ಪ್ರಜ್ವಲ್ ಎಸ್‌. ಶೆಟ್ಟಿ, ರಾಘವೇಂದ್ರ ಎಸ್‌., ಅಭಿಶೇಕ್ ಜೆನ್ನಿ, ಶಾರದಾ, ಆದಿತ್ಯ, ನಾಗರಾಜ ಉಪಾಧ್ಯ, ಶೋಭಿತ್ ನೊರೊನ್ಹಾ, ಕುಮಾರಿ ಶಿಲ್ಪಾ, ಆರೂರು ಸುಕೇಶ್ ಶೆಟ್ಟಿ, ಶ್ರೀಧರ್ ಸುಬ್ರಾಯ ಭಟ್, ಗುರುಪ್ರಸಾದ್ ಜಿ.ಎಸ್, ನಾಗರತ್ನ ನಾಯ್ಕ್, ಬಾಲಚಂದ್ರ, ಸಂಜಯ್ ಕರ್ಕೇರ, ಪ್ರಸಾದ್ ಕುಮಾರ್ ಶೆಟ್ಟಿ, ಲವೀನಾ ಫೆರ್ನಾಂಡಿಸ್, ಸಂಜೀವ ಎ., ಗಣೇಶ್ ಕುಮಾರ್ ಮಟ್ಟು, ಹಮ್ಜತ್ ಮತ್ತು ಅಮೃತಕಲಾ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!