ಉಡುಪಿ: ಎಟಿಎಂನಲ್ಲಿ ಹಣ ಬ್ಲಾಕ್- ಕಸ್ಟಮರ್ ಕೇರ್ ಹೆಸರಲ್ಲಿ 3.95ಲಕ್ಷ ರೂ. ವಂಚನೆ
ಉಡುಪಿ: ಎ.ಟಿ.ಎಂ.ನಲ್ಲಿ ಹಣ ಬಾರದೇ ಇದ್ದುದರಿಂದ ಕಸ್ಟಮರ್ ಕೇರ್ ನಂಬರ್ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆಯಿಂದ 3.95 ಲಕ್ಷ ರೂ. ವರ್ಗಾಹಿಸಿ ಕೊಂಡು ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.
ಪ್ರಶಾಂತ್ ಎಂಬವರು ಎಟಿಎಂ ನಲ್ಲಿ ಹಣ ಬಾರದೆ ಇದ್ದಾಗ ಕಸ್ಟಮರ್ ಕೇರ್ ಮೊಬೈಲ್‌ವೊಂದಕ್ಕೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ತಾನು ಎ.ಟಿ.ಎಂ. ಸಿಬ್ಬಂದಿ ಎಂದು ಹೇಳಿ, ಪ್ರಶಾಂತ್ ಅವರ ಕಾರ್ಡ್ ವಿವರ ಪಡೆದು, ಒಟ್ಟು 3,95,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಪ್ರಕರಣದ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆ ಬಗ್ಗೆ ದೂರು ದಾಖಲಾಗಿದೆ.