ಉಡುಪಿ: ಟೆಲಿಗ್ರಾಮ್ ಆ್ಯಪ್‌ ಹೆಸರಿನಲ್ಲಿ ಮಹಿಳೆಗೆ 1.35ಲಕ್ಷ ರೂ. ವಂಚನೆ

ಉಡುಪಿ: ಟೆಲಿಗ್ರಾಮ್ ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿ ತಾನು ಕಂಪೆನಿಯೊಂದರ ಅಧಿಕಾರಿ ಎಂದು ಹೇಳಿ ರೇಣುಕಾ ಎಂಬವರಿಗೆ ಸಂದೇಶ ಕಳುಹಿಸಿದ್ದು, ಈ ಕಂಪೆನಿಯಲ್ಲಿ ಹಣ ತೊಡಗಿಸಿದರೆ, ಹೆಚ್ಚಿನ ಲಾಭಾಂಶದ ಹಣ ನೀಡುವುದಾಗಿ ನಂಬಿಸಿದ್ದನು. ಅದನ್ನು ನಂಬಿದ ರೇಣುಕಾ, ಒಟ್ಟು 1,35,000ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮುಖೇನ ಜಮೆ ಮಾಡಿ ಮೋಸ ಹೋಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!