ಕಾಪು: ಕೆವೈಸಿ ಅಪ್‌ಡೇಟ್ ಹೇಳಿ ಮಹಿಳೆಗೆ 3.38ಲಕ್ಷ ವಂಚನೆ

ಕಾಪು: ಕೆವೈಸಿ ಅಪ್‌ಡೇಟ್ ಮಾಡುವಂತೆ ಹೇಳಿ ವಲೆರಿಯನ್ ಎಂಬವರಿಗೆ ಸಂದೇಶ ಬಂದಿದ್ದು, ಅದನ್ನು ನಂಬಿದ ಅವರು ತನ್ನ ಎಟಿಎಂ ಕಾರ್ಡ್ ನಂಬರ್ ಮತ್ತು ಬಳಿಕ ಬಂದ ಓಟಿಪಿ ನಂಬರ್ ಕೂಡ ನೀಡಿದ್ದರು. ಅದರಂತೆ ದುಷ್ಕರ್ಮಿಗಳು ಇವರ ಖಾತೆಯಿಂದ ಒಟ್ಟು 3,38,199ರೂ. ಹಣವನ್ನು ಕಡಿತ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!