ಮಂಗಳೂರು ವೈದ್ಯಕೀಯ ವಿದ್ಯಾರ್ಥಿಗೆ ಕಿರುಕುಳ: ಆರೋಪಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಮಂಗಳೂರು: 2017ರ ದೇರಳಕಟ್ಟೆಯ ಯುವತಿಯರ ಹಾಸ್ಟೆಲ್‌ಗೆ ದಾಳಿ ನಡೆಸಿ, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ವ್ಯಕ್ತಿಯೋರ್ವರಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2017 ರಲ್ಲಿ ಉಲ್ಲಾಳ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ನ್ಯಾಯಮೂರ್ತಿ ಸೈದುನ್ನಿಸಾ ಆರೋಪಿ ನಾಗೇಶ್ (30) ಎಂಬಾತನಿಗೆ ಏಳು ವರ್ಷಗಳ ಶಿಕ್ಷೆ  ವಿಧಿಸಿ ತೀರೌ ಪ್ರಕಟಿಸಿದ್ದಾರೆ. 

ನಾಗೇಶ್‌ ಹಾಸ್ಟೆಲ್‌ಗೆ ನುಗ್ಗಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿಯನ್ನು ಬೆದರಿಸಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದನು. ನಂತರ, ಆಕೆಯ ಪರ್ಸ್‌ನಿಂದ 3 ಸಾವಿರ ರೂ. ಮತ್ತು ಎಟಿಎಂ ಕಾರ್ಡ್‌ ಕದ್ದು, ಅದರ ಪಿನ್‌ ಕಾರ್ಡ್‌ ತಿಳಿಸುವಂತೆ ಬೆದರಿಸಿ ಪರಾರಿಯಾಗಿದ್ದನು. ನಂತರ, ಆಕೆಯ ಎಟಿಎಂನಿಂದ ಹಣ ಹಿಂಪಡೆದಿದ್ದನು.

ನಾಗೇಶ್ ಮುಂಜಾನೆ 4.30 ರ ಸುಮಾರಿಗೆ ಹಾಸ್ಟೆಲ್ ಹಿಂಭಾಗದಲ್ಲಿದ್ದ ಪೈಪ್ ಮೂಲಕ ಹಾಸ್ಟೆಲ್‌ಗೆ ಪ್ರವೇಶಿಸಿ ವೈದ್ಯಕೀಯ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿದ್ದ, 

ಪೊಲೀಸರು ಆತನನ್ನು ಬೆರಳಚ್ಚು ಸಾಕ್ಷಿ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!