ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: 28 ಕ್ಷೇತ್ರಗಳಿಗೆ ವೀಕ್ಷಕರನ್ನಾಗಿ ಸಚಿವರ ನೇಮಕ
ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನಾಗಿ ಸಚಿವರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
2024 ರ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷದ ಎಲ್ಲಾ ಹಂತಗಳ ಮುಖಂಡರುಗಳನ್ನು ಸಂಪರ್ಕಿಸಿ ಸಭೆಗಳನ್ನು ಆಯೋಜಿಸಿ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ವರದಿ ನೀಡಲು ವೀಕ್ಷಕರುಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?
1.ಬಾಗಲಕೋಟೆ – ಪ್ರಿಯಾಂಕ ಖರ್ಗೆ
2. ಬೆಂಗಳೂರು ಕೇಂದ್ರ – ಎನ್ಎಸ್ ಬೋಸರಾಜು
3. ಬೆಂಗಳೂರು ಉತ್ತರ – ಡಾ ಜಿ ಪರಮೇಶ್ವರ್
4. ಬೆಂಗಳೂರು ಗ್ರಾಮಾಂತರ – ಕೆ ವೆಂಕಟೇಶ್
5. ಬೆಂಗಳೂರು ದಕ್ಷಿಣ – ಡಾ ಶರಣಪ್ರಕಾಶ ಪಾಟೀಲ್
6. ಬೆಳಗಾವಿ – ಶಿವರಾಜ್ ತಂಗಡಗಿ
7. ಗುಲ್ಬರ್ಗಾ – ಬಿ ನಾಗೇಂದ್ರ
8. ಬೀದರ್ – ಸಂತೋಷ್ ಎಸ್ ಲಾಡ್
9. ವಿಜಯಪುರ – ಸತೀಶ್ ಜಾರಕಿಹೊಳಿ
10. ಚಾಮರಾಜನಗರ – ದಿನೇಶ್ ಗುಂಡೂರಾವ್
11. ಚಿಕ್ಕಬಳ್ಳಾಪುರ – ಜಮೀರ್ ಅಹ್ಮದ್ಖಾನ್
12. ಚಿಕ್ಕೋಡಿ – ಡಿ ಸುಧಾಕರ್
13. ಚಿತ್ರದುರ್ಗ – ಎಚ್ಸಿ ಮಹದೇವಪ್ಪ
14. ದಕ್ಷಿಣ ಕನ್ನಡ – ಮಧು ಬಂಗಾರಪ್ಪ
15. ದಾವಣಗೆರೆ – ಈಶ್ವರ್ ಖಂಡ್ರೆ
16. ಧಾರವಾಡ – ಲಕ್ಷ್ಮೀ ಹೆಬ್ಬಾಳ್ಕರ್
17. ಬಳ್ಳಾರಿ – ಶಿವಾನಂದ ಪಾಟೀಲ್
18. ಹಾಸನ – ಎನ್ ಚಲುವರಾಯಸ್ವಾಮಿ
19. ಹಾವೇರಿ – ಎಸ್ಎಸ್ ಮಲ್ಲಿಕಾರ್ಜುನ
20. ಕೋಲಾರ – ರಾಮಲಿಂಗಾರೆಡ್ಡಿ
21. ಕೊಪ್ಪಳ – ಆರ್ಬಿ ತಿಮ್ಮಾಪುರ
22. ಮಂಡ್ಯ – ಡಾ ಎಂಸಿ ಸುಧಾಕರ್
23. ಮೈಸೂರು – ಬೈರತಿ ಸುರೇಶ್
24. ರಾಯಚೂರು – ಕೆಎಚ್. ಮುನಿಯಪ್ಪ
25. ಶಿವಮೊಗ್ಗ – ಕೆಎನ್. ರಾಜಣ್ಣ
26. ತುಮಕೂರು – ಕೃಷ್ಣ ಬೈರೇಗೌಡ
27. ಉಡುಪಿ – ಚಿಕ್ಕಮಗಳೂರು – ಮಂಕಾಳ ವೈದ್ಯ
28. ಉತ್ತರ ಕನ್ನಡ – ಎಚ್.ಕೆ ಪಾಟೀಲ್