ಕುಂದಾಪುರ: ಗಿರಿಜಾ ಸರ್ಜಿಕಲ್ಸ್‌ನಲ್ಲಿ ಸಮಾಜ ಸೇವಕಿಗೆ ಸನ್ಮಾನ

ಕುಂದಾಪುರ: ಗಿರಿಜಾ ಸರ್ಜಿಕಲ್ಸ್ ಪ್ರಯೋಜಕತ್ವದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ನಿರೂಪಕ ಅವಿನಾಶ್ ಕಾಮತ್ ಅವರ ಸಂಯೋಜಿತ ಕೂತು ಮಾತಾಡುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಕಾರ್ಕಳದಲ್ಲಿ ಉಚಿತ ಅನಾಥಾಶ್ರಮ ನಡೆಸುತಿರುವ ಬಡಜನರ, ಅನಾಥರ ಪಾಲಿನ ತಾಯಿ ಆಯಿಷಾ ಬಾನು ಅವರಿಗೆ ಆರ್ಥಿಕ ಸಹಾಯದ ಜೊತೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೂತು ಮಾತಾಡುವ ಸರಣಿ ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಸಾಹಿತಿ ಮತ್ತು ನ್ಯಾಯವಾದಿಗಳು ಎ.ಎಸ್. ಎನ್.ಹೆಬ್ಬಾರ್, ಗಿರಿಜಾ ಗ್ರೂಪ್ ಆಪ್ ಕನ್ಸರ್ನ್ ಪ್ರವರ್ತಕ ರವೀಂದ್ರ ಶೆಟ್ಟಿ, ಸುರೇಖಾ ರವೀಂದ್ರ ಶೆಟ್ಟಿ , ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!