ಪ್ರಯಾಣಿಕ ಬಿಟ್ಟು ಹೋದ ಅಮೂಲ್ಯ ದಾಖಲೆ ಪತ್ರ ಹಸ್ತಾಂತರಿಸಿದ ರಿಕ್ಷಾ ಚಾಲಕ
ಮಣಿಪಾಲ: ಪ್ರಯಾಣಿಕರು ಬಿಟ್ಟುಹೋಗಿದ್ದ ಅಮೂಲ್ಯ ದಾಖಲೆ ಪತ್ರ ಹಾಗೂ ಲಕ್ಷಾಂತರ ರೂ. ಮೌಲ್ಯ ಬರೆದ ಚೆಕ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ.
ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಮಣಿಪಾಲ ಇದರ ಸದಸ್ಯರಾದ ಸತೀಶ್ ಎಂ ಎಂಬವರು ರಿಕ್ಷಾದಲ್ಲಿ ಕುಂದಾಪುರದ ಎಚ್. ಅನಂತ್ ದೇವಾಡಿಗ ಎಂಬುವರು ಶನಿವಾರ 12:30ಕ್ಕೆ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿರುತ್ತಾರೆ.
ಬಳಿಕ ಅಮೂಲ್ಯವಾದ ದಾಖಲೆ, ಚೆಕ್ ಇರುವ ಮಾಹಿತಿ ತಿಳಿಯದ ಚಾಲಕ ಸತೀಶ್ ತಮ್ಮ ನಿಲ್ದಾಣಕ್ಕೆ ಮರಳಿ ಬಂದಾಗ ರಿಕ್ಷಾದಲ್ಲಿ ಅನಂತ್ ಎಚ್. ಅಮೂಲ್ಯವಾದ ದಾಖಲಾತಿ ಹಾಗೂ ಚೆಕ್ ಇರುವುದನ್ನು ನೋಡಿದರು.
ಸತೀಶ್ ಅವರು ತಕ್ಷಣ ಸಂಘದ ಅಧ್ಯಕ್ಷರಾದ ವಿಜಯ್ ಪುತ್ರನ್ ಹಿರೇಬೆಟ್ಟು ಇವರಿಗೆ ವಿಷಯವನ್ನು ನೀಡಿದ್ದರು. ತಕ್ಷಣವೇ ವಿಜಯ್ ಪುತ್ರನ್ ಇವರು ಸಂಬಂಧಿಸಿದ ವ್ಯಕ್ತಿಗೆ ದಾಖಲೆ ಹಾಗೂ ಚೆಕ್ಕನ್ನು ಮರಳಿ ನೀಡುವಲ್ಲಿ ಶ್ರಮಿಸಿದರು. ದಾಖಲಾತಿಗಳನ್ನು ವಾರಿಸುದಾರರಿಗೆ ನೀಡುವಲ್ಲಿ ಮಣಿಪಾಲ ಠಾಣಾಧಿಕಾರಿಯದ ದೇವರಾಜ್ ಹಾಗೂ ಪಿಎಸ್ಐ ಅಕ್ಷಯ ಕುಮಾರಿ, ರಾಘವೇಂದ್ರ ಸಿಎಸ್‌ಐ ಹಾಗೂ ಎಎಸ್ಐ ಮನೋಹರ್ ಕುಮಾರ್ ಇವರ ಮುಖೇನ ಚೆಕ್ ಹಾಗೂ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಂತಹ ಅನಂತ್ ದೇವಾಡಿಗ ಇವರಿಗೆ ಹಸ್ತಾಂತರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ನಿಲ್ದಾಣದ ಸದಸ್ಯರಾದ ಸಂಜೀವ್ ಪೂಜಾರಿ ಅಶ್ರಫ್ ಸಹಕರಿಸಿರುತ್ತಾರೆ.