ಶಾಲೆಗಳ ಪುನರಾರಂಭಕ್ಕೆ ಸಿದ್ಧತೆ: ಅಂತರ ಕಾಪಾಡಲು ಪಾಳಿ ಪದ್ಧತಿ ?

ಬೆಂಗಳೂರು: ಕೋವಿಡ್‌ ಕಾರಣದಿಂದ ಮುಚ್ಚಿರುವ ಶಾಲೆಗಳನ್ನು ಮತ್ತೆ ಪ್ರಾಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕೆ ಪೂರಕವಾದ ಮಾರ್ಗ ಸೂಚಿಯನ್ನು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ತಯಾರು ಮಾಡಿದೆ.

ವಿದ್ಯಾರ್ಥಿಗಳ ಮಧ್ಯೆ ವ್ಯಕ್ತಿಗತ ಅಂತರ ಕಾಪಾಡಲು ಅಳವಡಿಸ ಬೇಕಾದ ಮಾದರಿಯನ್ನು ಸೂಚಿಸಿದೆ. ಶಾಲೆಯ ಆವರಣವನ್ನು ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಅಂತರ (ಕನಿಷ್ಠ ಒಂದು ಮೀಟರ್‌) ಕಾಪಾಡಿಕೊಂಡು ಇಡೀ ದಿನ ತರಗತಿ ನಡೆಸಬಹುದು. ಹೆಚ್ಚಿರುವ ಶಾಲೆ
ಗಳಲ್ಲಿ ಬೆಳಿಗ್ಗೆ (8ರಿಂದ 12) ಮತ್ತು ಮಧ್ಯಾಹ್ನ (1ರಿಂದ 5) 40 ನಿಮಿಷ ಅವಧಿಯ ಐದು ತರಗತಿ ನಡೆಸಬಹುದು. ಮೂರನೇ ತರಗತಿಯ ನಂತರ 30 ನಿಮಿಷದ ವಿರಾಮ ಇರಲಿದೆ.

ಒಂದೇ ಆವರಣದಲ್ಲಿ 2, 3 ಶಾಲೆಗಳಿದ್ದರೆ, ಶಾಲೆಯವರು ಬಯಸಿದರೆ ಎಲ್ಲಾ ಕೊಠಡಿಗಳನ್ನು ಬಳಸಿಕೊಂಡು, ಕಿರಿಯ ತರಗತಿಗಳಿಗೆ ಒಂದು ಪಾಳಿ, ಹಿರಿಯ ವಿದ್ಯಾರ್ಥಿ
ಗಳಿಗೆ ಮತ್ತೊಂದು ಪಾಳಿಯಲ್ಲಿ ಅಥವಾ ಎರಡೂ ತರಗತಿಗಳನ್ನು ಎರಡು ಪಾಳಿಯಲ್ಲಿ ನಡೆಸಬಹುದು. ಈ ಪದ್ಧತಿಯಿಂದ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ದಿನ ಬಿಟ್ಟು ದಿನ ಶಾಲೆ ನಡೆಸಬಹುದು. ಈ ಮಾದರಿಗಳಲ್ಲಿ ಶಾಲೆ ನಡೆಸಲು ಶಿಕ್ಷಕರ ಕೊರತೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಬೇಕು.

ಮೂರು ಅಡಿ ಅಂತರದಲ್ಲಿ ವೃತ್ತ: ಶಾಲೆಯ ಪ್ರವೇಶ ದ್ವಾರದಲ್ಲಿ ಮೂರು ಅಡಿ ಅಂತರದಲ್ಲಿ ವೃತ್ತ ಗುರುತು ಮಾಡಿ, ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಓಡಾಡುವಂತೆ ನೋಡಿಕೊಳ್ಳಬೇಕು.  ಸ್ಯಾನಿಟೈಜರ್‌ ಅಥವಾ ಸಾಬೂನಿನಿಂದ ಕೈತೊಳೆದುಕೊಂಡ ಬಳಿಕ ಥರ್ಮಲ್‌ ಸ್ಕ್ಯಾನರ್‌ನಿಂದ ದೇಹದ ಉಷ್ಣತೆ ಪರೀಕ್ಷಿಸಬೇಕು. ಜ್ವರದ ಲಕ್ಷಣಗಳಿದ್ದರೆ ಹಾಜರಾತಿ ನೀಡಿ ಮನೆಗೆ ಕಳುಹಿಸಬೇಕು.

ಪ್ರತಿ ಬೆಂಚ್‌ನಲ್ಲಿ ಇಬ್ಬರಿಗೆ ಅವಕಾಶ. ಪ್ರಾರ್ಥನೆ, ಶೌಚಾಲಯ, ಬಿಸಿಯೂಟ ವಿತರಣೆ ಹೀಗೆ ಎಲ್ಲ ಕಡೆ ಗುರುತು ಹಾಕಿ ಅಂತರ ಕಾಪಾಡುವುದು ಕಡ್ಡಾಯ. ಶಾಲಾ ಬಸ್ಸಿನಲ್ಲಿ ಒಟ್ಟು ಸಾಮರ್ಥ್ಯದ ಶೇ 50ರಷ್ಟು ವಿದ್ಯಾರ್ಥಿಗಳನ್ನು ಕರೆದೊಯ್ಯಬಹುದು.

ಶಾಲೆ ಆರಂಭಿಸುವ ಮುನ್ನ ಎಸ್‌ಡಿಎಂಸಿ ಸದಸ್ಯರಿಗೆ ಮಾಹಿತಿ ನೀಡಬೇಕು. ತರಗತಿವಾರು ಪೋಷಕರ ಸಭೆ ಕರೆದು ಅವರಿಗೆ ಮನವರಿಕೆ ಮಾಡಿಕೊಡಬೇಕು.

ಆರೋಗ್ಯ ಸಮಿತಿ: ಶಾಲೆಯಲ್ಲಿಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡ ಆರೋಗ್ಯ ಕ್ಲಬ್‌ ರಚಿಸಬೇಕು. ಚಟುವಟಿಕೆಗಳ ನಿರ್ವಹಣೆಗೆ ಶಾಲೆಯ ಸಂಚಿತ ನಿಧಿ ಬಳಸಬಹುದು.

ವಿದ್ಯಾರ್ಥಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಪೋಷಕರೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಾಸ್ಕ್ ಕಡ್ಡಾಯ. ಮಾಸ್ಕ್‌ಅನ್ನು ಹತ್ತಿಯ ಬಟ್ಟೆಯಿಂದ ಮನೆಯಲ್ಲೇ ತಯಾರಿಸಿ ಕೊಳ್ಳಬಹುದು. ಪ್ರತಿ ಮೂರು ಗಂಟೆಗೊಮ್ಮೆ ಬದಲಾಯಿಸಲು ಅನುಕೂಲವಾಗುವಂತೆ ಎರಡು ಮಾಸ್ಕ್‌ ತರಬೇಕು. ತೊಳೆದುಕೊಂಡ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದು’ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

2 thoughts on “ಶಾಲೆಗಳ ಪುನರಾರಂಭಕ್ಕೆ ಸಿದ್ಧತೆ: ಅಂತರ ಕಾಪಾಡಲು ಪಾಳಿ ಪದ್ಧತಿ ?

  1. Hale outdated system idhu. Online vidhyabhysa uthama . Hale outdated systemannu badalayisi. Yaaru thamma makkalanna shalege kalisalikke ishtha paduvanthilla corona samayadindha

Leave a Reply

Your email address will not be published. Required fields are marked *

error: Content is protected !!