ಅ.15-24 ಉಚ್ಚಿಲ ದಸರಾ ಮಹೋತ್ಸವ: ಆಮಂತ್ರಣ ಪತ್ರಿಕೆ‌ ಬಿಡುಗಡೆ

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಎರಡನೇ ವರ್ಷದ ದಸರಾ ಮಹೋತ್ಸವ ಅ.15ರಿಂದ 24ರವರೆಗೆ ವೈಭವಯುತವಾಗಿ ಸಂಪನ್ನಗೊಳ್ಳಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಹೇಳಿದರು.

ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರ ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಅನ್ನಸಂತರ್ಪಣೆ, ಭುವನೇಂದ್ರ ಕಿದಿಯೂರು ಅವರಿಂದ ಹಾಲು ಪಾಯಸ ಸೇವೆ ನೀಡಲಿದ್ದಾರೆ.
ಪ್ರತಿದಿನ ಭಜನೆ ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗ ಳೊಂದಿಗೆ ವಿಜ್ರಂಭಣೆಯಿಂದ ದಸರಾ ಮಹೋತ್ಸವ ನಡೆಯಲಿದೆ.

25 ಕೀ ಮೀ.ದೂರದ ಕಾಲ್ನಡಿಗೆ ಶೋಭಾಯಾತ್ರೆಯಲ್ಲಿ ತೆರಳಿ ಅ. 24ರಂದು ಜಲಸ್ತಂಭನ ನೆರವೇರಿಸಲಾಗು ವುದು. ಕಳೆದ ಬಾರಿಯಂತೆಯೇ ಜಲಸ್ತಂಭನ ಸಂದರ್ಭದಲ್ಲಿ ಗಂಗಾರತಿ ಆಕರ್ಷಣೆಯೊಂದಿಗೆ ನಡೆಯಲಿದ್ದು, ಸಮಾಜ ಭಾಂದವರು ಹಾಗೂ ನಂಬಿದ ಎಲ್ಲಾ ಭಕ್ತಾಧಿಗಳು ಭಾಗವಹಿಸಿ ಉಚ್ಚಿಲ ದಸರಾ ಒಳ್ಳೆಯ ರೀತಿಯಲ್ಲಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರಉಪಾಧ್ಯಾಯ ಆಮಂತ್ರಣ ಪತ್ರಿಕೆ ಬಿಡುಗಡೆ ಧಾರ್ಮಿಕ ಕಾರ್ಯ ನೇರವೇರಿಸಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ,, ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಅಮೀನ್ , ಪ್ರಮುಖರಾದ ಭುವನೇಂದ್ರ ಕಿದಿಯೂರು, ಸುಭಾಸ್ ಚಂದ್ರ ಕಾಂಚನ್ ಬೋಳಾರ್, ಹರಿಯಪ್ಪ ಕೋಟ್ಯಾನ್, ದಯಾನಂದ ಕೆ ಸುವರ್ಣ ಮಲ್ಪೆ, ಸುಧಾಕರ ಕುಂದರ್ ಬಂಕೇರಕಟ್ಟ, ಸುಜಿತ್ ಎಸ್ ಸಾಲ್ಯಾನ್ ಮುಲ್ಕಿ,
ನಾರಾಯಣ ಸಿ ಕರ್ಕೇರ ಕಾಡಿಪಟ್ಣ ಪಡುಬಿದ್ರಿ, ಕೇಶವ ಎಮ್ ಕೋಟ್ಯಾನ್ ಕುತ್ಪಾಡಿ, ಸಂಜೀವ ಮೆಂಡನ್ ಕೊಪ್ಪಲ, ರವೀದ್ರ ಸಾಲ್ಯಾನ್ ಹಿರಿಯಡ್ಕ, ಶಂಕರ್ ಸಾಲ್ಯಾನ್ ಬಾರ್ಕೂರು, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಎರ್ಮಾಳು, ದಿನೇಶ್ ಕೋಟ್ಯಾನ್ ಮೂಳೂರು, ಮನೋಜ್ ಕಾಂಚನ್ ಎರ್ಮಾಳ್, ಉಷಾರಾಣಿ ಬೋಳೂರ್, ಸುಗುಣ ಕರ್ಕೇರ ಮೂಳೂರು, ದೇಗುಲದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!