ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪುತ್ತಿದೆ- ಕಾರ್ಕಳ ಜನಜಾಗೃತಿ ವೇದಿಕೆ

ಕಾರ್ಕಳ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಮ್ಮ ನಾಗರಿಕ ಸಮಾಜದಲ್ಲಿ ಅತ್ಯಂತ ದುಖಃಕರ ಮತ್ತು ತಲೆ ತಗ್ಗಿಸುವಂತ ವಿಷಯ. ಸೌಜನ್ಯಳ ವಿಚಾರದಲ್ಲಿ ಖಂಡಿತವಾಗಿಯೂ ನ್ಯಾಯ ಸಿಗಬೇಕು. ಸೌಜನ್ಯ ಪರ ನ್ಯಾಯಬದ್ಧ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ, ಆದರೆ ಇತ್ತೀಚಿನ ದಿನಗಳಲ್ಲಿ ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪುತ್ತಿದ್ದು ಯಾವುದೋ ಒಂದು ಕುಟುಂಬದವರ ಮೇಲೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಯಾವುದೇ ದಾಖಲೆ ಇಲ್ಲದೇ ಬಾಯಿಗೆ ಬಂದ ಹಾಗೆ ತೆಗಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬಹಳ ಬೇಸರದ ವಿಷಯ ಎಂದು ಕಾರ್ಕಳ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಪ್ರಕಾಶ್ ಸಭಾಂಗಣದಲ್ಲಿ ನಡೆದ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಕಾರ್ಕಳ ಇದರ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಧಾರ್ಮಿಕ ಭಾವನೆಗಳಿಗೆ ಕುಂದು ಉಂಟುಮಾಡುವ, ಪರಮ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರನ್ನು ತೇಜೋವಧೆ ಮಾಡುವಂತಹ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಭಾಷಣದ ಮುಖಾಂತರ ಅಥವಾ ಮಾಧ್ಯಮ ಪತ್ರಿಕೆಯ ಮುಖಾಂತರ ಹೇಳುವುದರ ಮುಖಾಂತರ ಜನಸಾಮಾನ್ಯರಲ್ಲಿ ಗೊಂದಲವುಂಟು ಮಾಡುವುದು ಎಷ್ಟು ಸರಿ. ಇದರಿಂದ ಸಮಾಜದಲ್ಲಿ ಆಶಾಂತಿ ಉಂಟು ಮಾಡುವ ಜೊತಗೆ ಧರ್ಮ ಧರ್ಮಗಳ ಮದ್ಯೆ ವೈಮನಸ್ಸು, ದ್ವೇಶ ಹುಟ್ಟಿಕೊಳ್ಳುತ್ತದೆ

ಸೌಜನ್ಯಳಿಗೆ ನ್ಯಾಯ ನ್ಯಾಯಲಯದ ಮುಖಾಂತರ ಸಿಗುತ್ತದೆ ಎಂಬ ನಂಬಿಕೆ ಎಲ್ಲಾ ಸಮಾಜದವರನ್ನು, ಮೇಲ್ಮನವಿ ಸಲ್ಲಿಸದೆ ಆದರೆ ಇವರು ನ್ಯಾಯಾಲಯ ದಲ್ಲಿ ಮರು ತನಿಖೆಗೆ ಊರು ಊರು ಸುತ್ತಿಕೊಂಡು ಯಾವುದೋ ದುರುದ್ದೇಶದಿಂದ ಈ ಸಭೆಯನ್ನು ಮಾಡುವುದು ಎಲ್ಲರಿಗೂ ತಿಳಿಯದ ವಿಷಯ. ಕಾರ್ಕಳದ ಜನತೆಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎನ್ನುವ ಭಾವನೆ ಇರುತ್ತದೆ. ಆದರೆ ಅದು ನ್ಯಾಯಮಾರ್ಗದಲ್ಲಿ ಮಾತ್ರ ದೊರಕಲು ಸಾದ್ಯ ಎಂಬ ಸತ್ಯ ಕೂಡಾ ತಿಳಿದಿದೆ. ಆದರೆ ಸೌಜನ್ಯ ಹೋರಾಟದ ನೆಪದಲ್ಲಿ ಕಾರ್ಕಳದಲ್ಲಿ ಶಾಂತಿಯನ್ನು ಕದಡಿ ಆಶಾತಿಯನ್ನು ಸೃಷ್ಟಿಸುವ ಹುನ್ನಾರವನ್ನು ಕಾರ್ಕಳದ ಜನತೆ ಎಂದಿಗೂ ಸಹಿಸುವುದಿಲ್ಲ.

ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಅಂತೋನಿ ಡಿಸೋಜ, ಸುಧಾಕರ ಶೆಟ್ಟಿ ಬಜಗೋಳಿ, ಯಶೋಧ ಶೆಟ್ಟಿ ಅಜೆಕಾರು ಕಾರ್ಕಳ ಜನ ಜಾಗೃತಿ ವೇದಿಕೆ ಕಾರ್ಯದರ್ಶಿ ಉದಯ್ ಕುಮಾರ್ ಹೆಗ್ಡೆ, ಸುರೇಶ್ ಶಿವಪುರ, ಕಮಲಕ್ಷ ನಾಯಕ್, pಸುಭಾಸ್ಚಂದ್ರ ಚೌಟ, ಮಹೇಶ್ ತುಪ್ಪೆಕಲ್ ಮೊದಲಾದವರು ಉಪಸ್ಥಿತರಿದ್ದರು.

.

Leave a Reply

Your email address will not be published. Required fields are marked *

error: Content is protected !!