ಮಲ್ಪೆ: ಕೋಸ್ಟಲ್ ಮಲ್ಟಿ ಪರ್ಪೋಸ್ ಕೋ- ಆ. ಸೊಸೈಟಿ 10% ಡಿವಿಡೆಂಟ್ ಹಂಚಿಕೆ

ಉಡುಪಿ: ಕೋಸ್ಟಲ್ ಮಲ್ಟಿ ಪರ್ಪೋಸ್ ಕೋ. ಆ. ಸೊಸೈಟಿ, ಮಲ್ಪೆ ಇದರ ವಾರ್ಷಿಕ ಮಹಾಸಭೆಯು ಕಾರ್ತಿಕ್ ಸಹಜ್ ಸಂಕೀರ್ಣದಲ್ಲಿ ಸೆ. 16 ರಂದು ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಕೋಟ್ಯಾನ್ ಅವರು ವಾರ್ಷಿಕ ವರದಿ ಮಂಡಿಸಿದರು ಮತ್ತು 10% ದಿವಿಡೆಂಟ್ ಘೋಷಿಸಲಾಯಿತು. ಅಧ್ಯಕ್ಷರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಅವರು ಮಾತನಾಡಿ ಸಂಸ್ಥೆ ಯಶಸ್ವಿಯಾಗಿ ಬೆಳೆಯಬೇಕಾದರೆ ಉತ್ತಮ ಗ್ರಾಹಕರು ಮತ್ತು ಗುಣಮಟ್ಟದ ಗ್ರಾಹಕ ಸೇವೆ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಂಘವು ಲಾಭದಾಯಕ ಹಾದಿಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಹಕರ ಉಪಯೋಗಕ್ಕಾಗಿ ಪ್ರಾರಂಭಿಸಿದ ಸೇಫ್ ಲಾಕರ್ ಸೌಲಭ್ಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ಇದರಿಂದ ಸದಸ್ಯರಿಗೆ ಬಹಳ ಉಪಯೋಗವಾಗಿದೆ.

ಮುಂದಿನ ವರುಷದಿಂದ ಲಾಭಾಂಶದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಪ್ರೆಸಿಲ್ಲಾ ಪಿರೇರಾ, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಸಿಇಒ ದಯಾನಂದ ಕೊಟ್ಯಾನ್ ಸ್ವಾಗತಿಸಿದರು, ಪ್ರಬಂಧಕರಾದ ರಾಜೇಶ್ ಬಂಗೇರಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!