ಉದ್ಯಾವರ: ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾಗಾರ ಮತ್ತು ಕಿಟ್ ವಿತರಣೆ

ಉದ್ಯಾವರ: ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ ಕಡೆಕಾರ್ ಇದರ ವತಿಯಿಂದ ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾಗಾರ ಮತ್ತು ಪ್ರಥಮ ಚಿಕಿತ್ಸೆ ಕಿಟ್ ವಿತರಣೆ ಕಾರ್ಯಕ್ರಮವು ಉದ್ಯಾವರ ಬಲೈಪಾದೆ ನಿತ್ಯಾನಂದ ಆರ್ಕೇಡ್ ನಲ್ಲಿ ನಡೆಯಿತು.

ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಮಾತನಾಡಿ  ಪ್ರಕೃತಿ ವಿಕೋಪಗಳಾದಾಗ, ಅವಘಡಗಳಾದಾಗ ಸ್ಥಳೀಯ ಸಂಘ ಸಂಸ್ಥೆಗಳು ಕೂಡಲೇ ಸ್ಪಂದನೆಯನ್ನು ನೀಡುತ್ತಿರುವುದು ಶ್ಲಾಘನಾರ್ಹ. ಸಂಘ ಸಂಸ್ಥೆಗಳ ಸದಸ್ಯರಿಗೆ ಪ್ರಥಮ ಚಿಕಿತ್ಸೆಗಳ ಬಗ್ಗೆ ತಿಳುವಳಿಕೆ ಇದ್ದಾಗ ಅಫಘಾತ ಸಂದರ್ಭಗಳನ್ನು ನಿಭಾಯಿಸಲು ಸುಲಭವಾಗುತ್ತದೆ, ಈ ನಿಟ್ಟಿನಲ್ಲಿ ಈ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ವೈದ್ಯಾಧಿಕಾರಿ ಡಾ. ಅಶೋಕ್ ಎಚ್ ಅವರು ಪ್ರಥಮ ಚಿಕಿತ್ಸೆಯ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಉದ್ಯಾವರ ಆಸುಪಾಸಿನ ಪ್ರಮುಖ ಸಂಘ ಸಂಸ್ಥೆಗಳಾದ ಉದ್ಯಾವರ ಫ್ರೆಂಡ್ಸ್ ಸರ್ಕಲ್, ನವಚೇತನ ಯುವಕ ಮಂಡಲ ಕಟ್ಟೆಗುಡ್ಡೆ, ಕೆಥೋಲಿಕ್ ಸಭಾ ಉದ್ಯಾವರ, ಯುವಕ ಮಂಡಲ ಉದ್ಯಾವರ, ಆಟೊ ಚಾಲಕ ಮತ್ತು ಮಾಲಕರ ಸಂಘ ಉದ್ಯಾವರ, ಎಂ.ವೈ.ಎ. ಉದ್ಯಾವರ, ಸಮಾನ ಮನಸ್ಕ ಯುವಕ ತಂಡ ಗುಡ್ಡೆಅಂಗಡಿ, ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ಕೇದಾರ್ ಫ್ರೆಂಡ್ಸ್, ಆಟೊ ಚಾಲಕ ಮತ್ತು ಮಾಲಕರ ಸಂಘ ಬಲಾಯಿಪಾದೆ,

ಜೆ.ಸಿ.ಐ ಉದ್ಯಾವರ ಕುತ್ಪಾಡಿ, ಯುವ ವಾಹಿನಿ ಮತ್ತು ಲಯನ್ಸ್ ಕ್ಲಬ್ ಉಡುಪಿ ರಾಯಲ್ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚೈತನ್ಯ ಫೌಂಡೇಶನ್ ವತಿಯಿಂದ ಭಾಗವಹಿಸಿದ ಸಂಘ ಸಂಸ್ಥೆಗಳಿಗೆ  ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಉಡುಪಿ ರಾಯಲ್ ಅಧ್ಯಕ್ಷರಾದ ಲ. ಡಾ. ಸಂತೋಷ್ ಕುಮಾರ್ ಬೈಲೂರು ವಂದಿಸಿದರು. ಸ್ಟೀವನ್ ಕುಲಾಸೋ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!