ಪಂಚಾಯತ್ ಚುನಾವಣೆಗೆ ಸಮರ್ಥ ಅಭ್ಯರ್ಥಿ ಆಯ್ಕೆಗೆ ಪ್ರಮೋದ್ ಮಧ್ವರಾಜ್ ಕರೆ
ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಅಂಬಲ್ಪಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ಅಂಬಲಪಾಡಿ ಪಂಚಾಯತ್ ಮಟ್ಟದ, ಪಂಚಾಯತ್ ಚುನಾವಣೆಯ ಪೂರ್ವಭಾವಿ ಕಾರ್ಯಕರ್ತರ ಸಭೆ ಕಪ್ಪೆಟ್ಟು ರವೀಶ್ ಪೂಜಾರಿ ಮನೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್‌ರವರು ಮಾತನಾಡುತ್ತಾ ಇತ್ತೀಚಿಗೆ ನೆರೆ ಬಂದಾಗ ಕಿದಿಯೂರು, ಬಂಕೇರಕಟ್ಟೆ, ಮಜ್ಜಿಗೆಪಾದೆ ದಡ್ಡಿ, ಮೊದಲಾದ ಪ್ರದೇಶದಲ್ಲಿ ಅಧಿಕಾರಿಗಳಿಗಿಂತ ಮೊದಲೇ ನಮ್ಮ ಪಕ್ಷದ ಕಾರ್ಯಕರ್ತರು ನೆರೆ ಪೀಡಿತ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಮುಂಬರುವ ಪಂಚಾಯತ್ ಚುನಾವಣೆಗೆ ಸ್ಥಳೀಯ ಚಿರಪರಿಚಿತ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಾರ್ಯಕರ್ತರ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು, ಇಂದಿರಾ ಗಾಂಧಿಯವರು ದೇಶದಲ್ಲಿ ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿ ಮಾಡಿದರೆ ಈ ಬಿಜೆಪಿ ಸರಕಾರ ಸರಕಾರವು ‘ಉಳ್ಳವನೇ ಹೊಲದೊಡೆಯ’ ಕಾನೂನು ತಂದು ಕೃಷಿಕರಿಗೆ ಬೀದಿಗೆ ಬೀಳುವ ಪರಿಸ್ಥಿತಿ ತಂದು ಹಾಕುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕೆರೆಯವರು ಮಾತನಾಡುತ್ತಾ ಈ ಬಾರಿ ಅಂಬಲಪಾಡಿ ಪಂಚಾಯತ್‌ನಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಈ ವಾತಾವರಣವನ್ನು ಮತವಾಗಿ ಪರಿವರ್ತಿಸುವಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಇಂದಿನಿಂದಲೇ ಕೆಲಸವನ್ನು ಪ್ರಾರಂಭಿಸಬೇಕಾಗಿ ವಿನಂತಿಸಿದರು. ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ ಅವರು ಮಾತನಾಡಿದರು.
ಸಭೆಯಲ್ಲಿ ಕೀರ್ತಿ ಶೆಟ್ಟಿ ಅಂಬಲಪಾಡಿ, ಗಣೇಶ್ ನೆರ್ಗಿ, ವೀಕ್ಷಕರಾದ ವಿಜಯ ಪೂಜಾರಿ, ಸುರೇಂದ್ರ ಆಚಾರ್ಯ, ನಾರಾಯಣ ಕುಂದರ್, ಪಂಚಾಯತ್‌ನ ನಿಕಟಪೂರ್ವ ಸದಸ್ಯರಾದ ಲಕ್ಷಣ ಪೂಜಾರಿ, ಸುರೇಶ್ ಪೂಜಾರಿ, ಶಕುಂತಳ, ರೀಟಾ ಗಾಮ, ಪೀರು ಸಾಹೇಬ್, ಜೆರೊಮ್ ಅಂದ್ರಾದೆ, ಲೂವಿಸ್ ಲೋಬೊ, ದಯಾನಂದ ಪೂಜಾರಿ, ಜ್ಯೋತಿ, ಉದಯ, ಮಹೇಶ್ ಶೆಟ್ಟಿ, ಸದಾನಂದ ಪೂಜಾರಿ, ಜಗನ್ನಾಥ ಪೂಜಾರಿ, ಮೋಹಿನಿ ಭಾಸ್ಕರ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಾಯಿರಾಜ್ ಕೋಟ್ಯಾನ್ ಸ್ವಾಗತಿಸಿದರು. ರವೀಶ್ ಪೂಜಾರಿ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾಯದರ್ಶಿ ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರೂಪಿಸಿದರು.