ಹವಳದಂತೆ ಹೊಳೆಯುತ್ತಿರುವ ಮಂಗಳ ಗ್ರಹ: ಡಾ.ಎ.ಪಿ.ಭಟ್

ಉಡುಪಿ: ಈ ತಿಂಗಳು ಪೂರ್ತಿ, ಸಂಜೆ ಯಾದೊಡನೆ, ಪೂರ್ವ ಆಕಾಶದಲ್ಲಿ , ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುತ್ತಿರುವ ಮಂಗಳ ಗ್ರಹ ಗೋಚರಿಸುತ್ತಿದೆ.

ಅಕ್ಟೊಬರ್ 13ರಂದು ಮಂಗಳ ಗ್ರಹ , ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ  ಭೂಮಿಗೆ ಮಂಗಳ ಹತ್ತಿರಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡು  ಇಡೀ ರಾತ್ರಿ , ಹವಳದಂತೆ ಕಾಣಿಸಲಿದೆ.


ಸುಮಾರು 24 ಕೋಟಿ ಕೀಮೀ ದೂರದಲ್ಲಿ ದೀರ್ಘ ವ್ರತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು.   ಭೂಮಿಯೂ ಸುಮಾರು 15 ಕೋಟಿ ಕೀಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50  ದಿನಗಳಲ್ಲಿ , ಸಮಿಪಿಸಿ ದೂರಸರಿಯುತ್ತವೆ. ನಾಡಿದ್ದು ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ದೂರದಲ್ಲಿ, ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ  39 ಕೋಟಿ ಕೀಮೀ ದೂರದಲ್ಲಿರುತ್ತಾ, ಚಿಕ್ಕದಾಗಿ ಗೋಚರಿಸುತ್ತದೆ. 


ಈಗ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮೀರಿಸುವ ಕೆಂಬಣ್ಣದ ಹವಳ, ಮಂಗಳ ಕಾಣುತ್ತಿದೆ ,ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ಅಕ್ಟೋಬರ್ ಒಂದನೇ ತಾರೀಕು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ.  ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ  ಬರೀ ಕಣ್ಣಿನಿಂದಲೇ ಗುರುತಿಸಬಹುದು, ನೋಡಿ ಆನಂದಿಸಿ.

ಡಾ. ಎ.ಪಿ. ಭಟ್, ಉಡುಪಿ.

1 thought on “ಹವಳದಂತೆ ಹೊಳೆಯುತ್ತಿರುವ ಮಂಗಳ ಗ್ರಹ: ಡಾ.ಎ.ಪಿ.ಭಟ್

Leave a Reply

Your email address will not be published. Required fields are marked *

error: Content is protected !!