ಜೆಸಿಐ ಗಣೇಶಪುರ: ಆಶಾಕಿರಣ ಟ್ರಸ್ಟ್‌ಗೆ ಆಹಾರ ಕಿಟ್ ವಿತರಣೆ

ಮಂಗಳೂರು: ಜೆಸಿಐ ಗಣೇಶಪುರದ ವತಿಯಿಂದ ಆಶಾಕಿರಣ ಟ್ರಸ್ಟ್‌ಗೆ ಆಹಾರ ಕಿಟ್ ಮತ್ತು ಕುತ್ತಾರ್‌ನ ಬಾಲ ಸಂರಕ್ಷಣಾ ಕೇಂದ್ರಕ್ಕೆ ರಾತ್ರಿಯ ಭೋಜನವನ್ನು ನೀಡಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಆಶಾಕಿರಣ ಟ್ರಸ್ಟ್‌ಗೆ, ಜೆಸಿಐ ಗಣೇಶಪುರವು ಆಹಾರ ಕಿಟ್ ವಿತರಿಸಿತು. ಆಹಾರ ಕಿಟ್ ಜೊತೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಪುಸ್ತಕಗಳನ್ನು ವಿತರಿಸಲಾಯಿತು.

ಆಹಾರ ಕಿಟ್ ಮತ್ತು ಪುಸ್ತಕವನ್ನು ಆಶಾ ಕಿರಣ್ ಟ್ರಸ್ಟ್ ನಿರ್ದೇಶಕಿ ಪುಷ್ಪಾ ಅವರಿಗೆ ಹಸ್ತಾಂತರಿಸಲಾಯಿತು. ಜೆಸಿಐ ಗಣೇಶಪುರದ ಅಧ್ಯಕ್ಷ ಜೆಸಿ ಸನತ್‌ ಕುಮಾರ್‌ ನಾಯ್ಕ್‌, ಮಕ್ಕಳ ವಿದ್ಯಾಭ್ಯಾಸಕ್ಕೆ ಶುಭ ಹಾರೈಸುವುದರ ಜೊತೆಗೆ ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಸಿಐ ಗಣೇಶಪುರ ಆಶಾ ಕಿರಣ್ ಟ್ರಸ್ಟ್ ನ ನಿರ್ದೇಶಕಿ ಪುಷ್ಪಾ ಅವರ ಸಮಾಜಮುಖಿ ಸೇವೆಗೆ ಕೈಲಾಗುವ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿತು. “ಹಸಿವು ಮುಕ್ತ ಸಮಾಜ” ಅಭಿಯಾನದಡಿ ಕುತ್ತಾರ್‌ನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಸುಮಾರು 80 ದೇವರ ಮಕ್ಕಳಿಗೆ ಜೆಸಿಐ ಗಣೇಶಪುರದ ವತಿಯಿಂದ ರಾತ್ರಿಯ ಭೋಜನವನ್ನು ನೀಡಲಾಯಿತು. ವಲಯ XVರ ಪೂರ್ವ ವಲಯ ಉಪಾಧ್ಯಕ್ಷರು ಜೆಸಿಐ ಸೆನ್. ಶರತ್ ಕುಮಾರ್ ಅವರ ಸುಪುತ್ರ ಮಾಸ್ಟರ್ ಹೃತಿಕ್ ಎಸ್ ರಾವ್, ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಜೆಸಿಐ ಗಣೇಶಪುರದ ಅಧ್ಯಕ್ಷ ಜೆಸಿ ಸನತ್ ಕುಮಾರ್ ನಾಯ್ಕ್, 2024 ರ ಚುನಾಯಿತ ಅಧ್ಯಕ್ಷ ಜೆಸಿ ವೇಣುಗೋಪಾಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!