ಕಡೆಕಾರು-ಕನ್ನರ್ಪಾಡಿ ರಸ್ತೆ ಕೆ.ಆರ್.ಐ.ಡಿ.ಎಲ್ ಕಳಪೆ ಕಾಮಗಾರಿ- ದುರಸ್ತಿಗೆ ಮನವಿ

ಉಡುಪಿ: ಕಡೆಕಾರು-ಕನ್ನರ್ಪಾಡಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯನ್ನು ಕೆ.ಆರ್.ಐ.ಡಿ.ಲ್ ಸಂಸ್ಥೆ ಮಾಡಿದ್ದು, ಕಾಮಗಾರಿ ನಡೆದ ಮೊದಲ ವರುಷದಲ್ಲೇ ರಸ್ತೆ ಹದಗೆಡಲು ಪ್ರಾರಂಭವಾಗಿತ್ತು. ಕೆಲವು ತಿಂಗಳ ಹಿಂದೆ ಈ ಕಳಪೆ ಕಾಮಗಾರಿಯ ಬಗ್ಗೆ ಮಾಧ್ಯಮದ ಮೂಲಕ ಗಮನಕ್ಕೆ ತಂದಿದ್ದು ಕೆ.ಆರ್.ಐ.ಡಿ.ಲ್ ಸಂಸ್ಥೆಯ ಅಧಿಕಾರಿಗಳು ಆಗಸ್ಟ್ 10 ನಂತರ ದುರಸ್ತಿ ಮಾಡಿ ಕೊಡುವ ಭರವಸೆಯನ್ನು ಪಂಚಾಯಿತ್‌ಗೆ ನೀಡಿದ್ದರು.

ಆದರೆ ಈ ಬಗ್ಗೆ ಯಾವುದೇ ಕ್ರಮವನ್ನು ಈವರೆಗೆ ತೆಗೆದುಕೊಂಡಿರುವುದಿಲ್ಲಾ ಹಾಗೂ ಶೀಘ್ರ ದುರಸ್ತಿಗೆ ಕೆ.ಆರ್.ಐ.ಡಿ.ಲ್ ಸಂಸ್ಥೆಗೆ ಒತ್ತಡ ಹಾಕುವಂತೆ ಸಾರ್ವಜನಿಕರ ಪರವಾಗಿ ಕಡೆಕಾರು ಗ್ರಾಮ ಪಂಚಾಯತು ಅಧ್ಯಕ್ಷರಿಗೆ ಮನವಿ ನೀಡಲಾಯಿತು.

ಕಡೆಕಾರು ಗ್ರಾಮ ಪಂಚಾಯತು ಅಧ್ಯಕ್ಷರಾದ ಜಯಕರ ಶೇರಿಗಾರ್ ಅವರು ಮನವಿ ಸ್ವೀಕರಿಸಿ ಈ ಬಗ್ಗೆ ಕೆ.ಆರ್.ಐ.ಡಿ.ಲ್ ಅಧಿಕಾರಿಗಳ ಬಳಿ ಚರ್ಚಿಸಿ ಶೀಘ್ರ ದುರಸ್ತಿ ಮಾಡಲು ಒತ್ತಡ ತರುವುದಾಗಿ ತಿಳಿಸಿದರು.

ಕಡೆಕಾರು ಗ್ರಾಮ ಪಂಚಾಯತು ಉಪಾಧ್ಯಕ್ಷ ನವೀನ್ ಶೆಟ್ಟಿ, ಚೈತನ್ಯ ಫೌಂಡೇಶನ್ ಪ್ರವರ್ತಕ ಸುನೀಲ್ ಸಾಲ್ಯಾನ್ ಕಡೆಕಾರ್, ಮಾಜಿ ಗ್ರಾಮ ಪಂಚಾಯತು ಸದಸ್ಯ ಜತಿನ್ ಕಡೆಕಾರ್, ಯಶೋಧ ಆಟೋ ಯುನಿಯನ್ ಅಧ್ಯಕ್ಷ ದಿವಾಕರ್ ಪೂಜಾರಿ,
ಲಯನ್ಸ್ ಕ್ಲಬ್ ಅಂಬಲಪಾಡಿ ಅಧ್ಯಕ್ಷ ಜಗನ್ನಾಥ್ ಕಡೆಕಾರ್, ಮಧುಸೂಧನ್, ಸುರೇಶ್ ಪೂಜಾರಿ, ಅಶೋಕ್ ಪಾಲನ್, ಉಮೇಶ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!