ಜೆಸಿಐ ಗಣೇಶಪುರ: ರಸ್ತೆ ಮಾರ್ಗಸೂಚಿ ಫಲಕ ಕೊಡುಗೆ, ರಸ್ತೆ ಸುರಕ್ಷತೆಯ ಕಿರುಚಿತ್ರ ಪ್ರದರ್ಶನ

ಮಂಗಳೂರು: ಜೆಸಿಐ ಗಣೇಶಪುರವು ಮಂಗಳೂರಿನ ಪ್ರತಿಷ್ಠಿತ ಎಂಆರ್‌ಪಿಯಲ್ ಕಂಪೆನಿಯ ಬಳಿಯಲ್ಲಿ ಇರುವಂತಹ, ಕೈಕಂಬ ಜಂಕ್ಷನ್‌ನಲ್ಲಿ ರಸ್ತೆಗಳನ್ನು ಸುಲಭವಾಗಿ ಗುರುತಿಸಲು, ರಸ್ತೆ ಸಂಕೇತ ಫಲಕವನ್ನು ಕೊಡುಗೆಯಾಗಿ ನೀಡಿತು.

ಈ ರಸ್ತೆಯ ಮೂಲಕ ಸಂಚಾರಿಸುವ ಸಾವಿರಾರು ಪ್ರಯಾಣಿಕರು ಈ ರಸ್ತೆ ಸಂಕೇತ ಫಲಕದ ಪ್ರಯೋಜನವನ್ನು ಪಡೆಯಲಿದ್ದಾರೆ. ಜೆಸಿಐ ಗಣೇಶಪುರದ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಫ್ಟ್‌ವೇರ್ ಡೆವಲಪರ್ ಧನ್ಯಾ ಶೆಟ್ಟಿ ಅವರು ರಸ್ತೆ ಸಂಕೇತ ಫಲಕವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರಾದ ಜೆಸಿ ಸನತ್ ಕುಮಾರ್ ನಾಯ್ಕ್ ಹಾಗೂ ಜೆಸಿಐ ಗಣೇಶಪುರದ ಎಲ್ಲಾ ಪೂರ್ವ ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಸ್ತುತ ದೇಶದಲ್ಲಿ ಬಹಳಷ್ಟು ಯುವ ಪೀಳಿಗೆ, ರಸ್ತೆ ಅಪಘಾತದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿರುವು ದರಿಂದ, ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು, ಜೆಸಿಐ ಗಣೇಶಪುರ, ರಸ್ತೆ ಸುರಕ್ಷತಾ ಕಿರುಚಿತ್ರಗಳನ್ನು ಪ್ರದರ್ಶಿಸಿ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿತು. ಎಂಡಿಎಸ್ ಕಾಲೇಜಿನ 250 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಎಂಡಿಎಸ್ ಕಾಲೇಜು ಪ್ರಾಂಶುಪಾಲೆ ರಾಧಿಕಾ, ಈ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪ್ರಯಾಣದ ಸಮಯದಲ್ಲಿ ರಸ್ತೆ ನಿಯಮಗಳು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವಂತೆ ಜೆಸಿಐ ಗಣೇಶಪುರದ ಅಧ್ಯಕ್ಷ ಜೆಸಿ ಸನತ್ ಕುಮಾರ್ ನಾಯ್ಕ್ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!