ನಿಟ್ಟೆ: ವಿಜಯ ಮುರಾರಿ ಟಿ. ಅವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿಜಯ ಮುರಾರಿ ಟಿ. ಅವರು ‘ಸೆಲೆಕ್ಟಿವ್ ಎನ್ಕ್ರಿಪ್ಶನ್ ಆಫ್ ವಿಡಿಯೋ ಫ್ರೇಮ್ಸ್ ಫಾರ್ ಅಥಂಟಿಕೇಟೆಡ್ ಸ್ಟ್ರೀಮೀಂಗ್ ಇನ್ ದ ಕಂಟೆಂಟ್ ಡೆಲಿವರಿ ನೆಟ್ವರ್ಕ್’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಭಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ.

ಇವರು ಹಾಸನದ ಮೊಸಳೆ ಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಕೆ ಸಿ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಯನ್ನು ನಡೆಸಿದ್ದರು. ವಿಜಯ ಮುರಾರಿ ಟಿ ಅವರು ಪುತ್ತೂರಿನ ಸರ್ವೆ ನಿವಾಸಿ ಟಿ. ಗೋಪಾಲಕೃಷ್ಣ ಭಟ್ ಹಾಗೂ ಟಿ. ವಸಂತಿ ಜಿ ಭಟ್ ಅವರ ಪುತ್ರ.

Leave a Reply

Your email address will not be published. Required fields are marked *

error: Content is protected !!