ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅ.ಬ್ಯಾಂಕ್: ಎ.ಟಿ.ಎಂ/ಡಿಜಿಟಲ್ ಬ್ಯಾಂಕಿoಗ್ ಉದ್ಘಾಟನೆ

ಉಡುಪಿ: ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಎ.ಟಿ.ಎಂ. ಮತ್ತು ಡಿಜಿಟಲ್  ಬ್ಯಾಂಕಿoಗ್ ಸೌಲಭ್ಯಗಳ ಸೇವೆಯು ಇತ್ತೀಚಿಗೆ ಪ್ರಾರಂಭಗೊoಡಿತು. ಈ ಸಮಾರಂಭದ ಉದ್ಘಾಟಕರಾಗಿ ಎಲೈಸಿಯ ಉಡುಪಿ ವಿಭಾಗೀಯ ಕಛೇರಿಯ ಹಿರಿಯ ವಿಭಾಗಾಧಿಕಾರಿಗಳಾದ ರಾಜೇಶ್ ವಿ. ಮುದೋಳ್ ಅವರು ಆಗಮಿಸಿ ಎ.ಟಿ.ಎಂ. ಉದ್ಘಾಟನೆ ಮತ್ತು ರುಪೇ ಕಾರ್ಡ್ನ ಬಿಡುಗಡೆಗೆ ಚಾಲನೆ ನೀಡಿ 61 ವ಼ರ್ಷಗಳ ಯಶಸ್ವಿ ಗ್ರಾಹಕ ಸೇವೆಯನ್ನು ಪೂರೈಸಿದ ಬ್ಯಾಂಕಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇಂದು ಅನುಸ್ಠಾನಗೊಳಿಸಿರುವ ಎ.ಟಿ.ಎಂ ಮತ್ತು ವಿವಿಧ ಡಿಜಿಟಲ್ ಸೌಲಭ್ಯಗಳು ಎಲ್ಲಾ ಗ್ರಾಹಕರಿಗೂ ತಲುಪುವಂತಾಗಲಿ ಹಾಗೂ ಮುಂದಿನ ದಿನಗಳಲ್ಲಿ ಬ್ಯಾಂಕು ಇನ್ನಷ್ಟು ಜನಸೇವೆಯಲ್ಲಿ ಅಭಿವೃದ್ಧಿ ಹೊಂದುವoತಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿ ಬಿಜು ಜೋಸೆಫ್, ಮಾರುಕಟ್ಟೆ ಪ್ರಬಂಧಕರು, ಎಲ್ಲೆಸಿ ವಿಭಾಗೀಯ ಕಛೇರಿ, ಉಡುಪಿ ಇವರು ಆಗಮಿಸಿ ಬ್ಯಾಂಕಿನ ಐ.ಎಂ.ಪಿ.ಎಸ್. ಮತ್ತು ಮೊಬೈಲ್ ಬ್ಯಾಂಕಿoಗ್ ಸೇವೆಗಳಿಗೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಹಕಾರಿ ಬ್ಯಾಂಕುಗಳು ಗ್ರಾಹಕ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆನೀಡುತ್ತಿರುವುದು ಒಂದುಉತ್ತಮಬೆಳವಣಿಗೆ. ಈದಿಸೆಯಲ್ಲಿ ಲಿಕೋಬ್ಯಾಂಕು ಆಧುನಿಕತಂತ್ರಜ್ಞಾನದೊoದಿಗೆ ಮುಂದಿನ ದಿನಗಳಲ್ಲಿ ಗ್ರಾಹಕ ಸೇವೆಯಲ್ಲಿ ಇನ್ನಷ್ಟು ಸಾಧನೆಗೈದು ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಯು.ಪಿ.ಐ, ಕಾರ್ಡುಗಳಿಗೆ ಚಾಲನೆ ನೀಡಿದ ಪುರಂದರ್, ವಿಕ್ರಯ ಅಧಿಕಾರಿ, ಎಲ್.ಐ.ಸಿ. ಉಡುಪಿ ವಿಭಾಗ ಇವರು ಮಾತನಾಡಿ ಇಂದು ಬ್ಯಾಂಕಿನ ಎಲ್ಲ ಕನಸುಗಳು ನನಸಾಗಿದೆ ಎನ್ನುತ್ತಾ ಉತ್ತಮ ಸೇವೆಯನ್ನು ಗೈದ ಬ್ಯಾಂಕಿನ ಸಿಬ್ಬಂದಿಗಳನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣ ಇವರು ಬ್ಯಾಂಕಿನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.  ಬ್ಯಾಂಕಿನ ಇಂದಿನ ಸಾಧನೆಗೆ ಕಾರಣೀಭೂತರಾದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು.

ಸಮಾರಂಭದ ವೇದಿಕೆಯಲ್ಲಿ ಐ.ಡಿ.ಬಿ.ಐ. ಬ್ಯಾಂಕಿನ ಉಡುಪಿ ಶಾಖೆಯ ಮುಖ್ಯಸ್ಥರಾದ ಗಣೇಶ್ ತಿಂಗಳಾಯ ಉಪಸ್ಥಿತರಿದ್ದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಇವರು ಪ್ರಾಸ್ತಾವಿಕ ಭಾಷಣಗೈದರು. ನಿರ್ದೇಶಕರಾದ ಕೆ.ಶಿವಪ್ರಸಾದ್ ಇವರು ಸ್ವಾಗತಿಸಿ, ಬ್ಯಾಂಕಿನ ಉಪಾಧ್ಯಕ್ಷರಾದ ಎ.ದಯಾನಂದ ಇವರು ಧನ್ಯವಾದಗಳನ್ನು ಅರ್ಪಿಸಿದರು. ಬ್ಯಾಂಕಿನ ಅಧಿಕಾರಿ ಪೂನಂ ಕದಂ ಇವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!