ರಾಷ್ಟ್ರಮಟ್ಟದ ಸ್ಪರ್ಧೆ- ಮುಕುಂದ ಕೃಪಾ ಶಾಲೆಯ ದೀಪೇಶ್ ಶೆಣೈ 46ನೇ ರ‍್ಯಾಂಕ್‌

ಉಡುಪಿ: ಮಣಿಪಾಲ ಶಿಕ್ಷಣ ಸಂಸ್ಥೆಯಾದ ಅಕಾಡಮಿ ಆಫ್ ಜನರಲ್ ಎಜುಕೇಷನ್‌ನ ಮುಕುಂದ ಕೃಪಾ ಶಾಲೆಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಯವರು WIZ NATIONAL SPELL BEE ರಾಷ್ಟ್ರಮಟ್ಟದಲ್ಲಿ ನಡೆಸಿದ 14 ನೇ ರಾಷ್ಟ್ರೀಯ ಮೆಗಾ ಫೈನಲ್ (2022-23)  ಕ್ಲಾಸ್ 7 ವಿಭಾಗದಲ್ಲಿ ರಾಷ್ಟ್ರಮಟ್ಟದ 46ನೇ ರ‍್ಯಾಂಕ್‌ ಗಳಿಸಿದ್ದಾರೆ. 

7ನೇ ತರಗತಿ ವಿಭಾಗದಲ್ಲಿ ಉಡುಪಿ ಜಿಲ್ಲೆಯಿಂದ ರ‍್ಯಾಂಕ್‌ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

ಮುಕುಂದ ಕೃಪಾ ಶಾಲೆ ತನ್ನ ಸುವರ್ಣ ಮಹೋತ್ಸವದ ಆಚರಿಸುವ  ಸುಸಂದರ್ಭದಲ್ಲಿ, ಶಾಲೆಯ ಇತಿಹಾಸದಲ್ಲಿ ರಾಷ್ಟ್ರೀಯ ಮೆಗಾ ಫೈನಲ್‌ನಲ್ಲಿ ರ‍್ಯಾಂಕ್ ಗಳಿಸಿದ ಮೊದಲ ವಿದ್ಯಾರ್ಥಿ ಕೀರ್ತಿಗೆ ಪಾತ್ರರಾಗಿದ್ದಾರೆ.

ಶಾಲೆಯ ಮುಖ್ಯೋಪಾದಾಯಿನಿ, ಶಿಕ್ಷಕರು, ಶಿಕ್ಷಕ ರಕ್ಷಕ ಸಂಘ, ಹಳೆವಿದ್ಯಾರ್ಥಿ ಸಂಘ ಮತ್ತು ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!