ಉಡುಪಿ: ಅಸಹಾಯಕ ಸ್ಥಿತಿಯಲ್ಲಿರುವ ಗಾಯಾಳುವಿನ ರಕ್ಷಣೆ.

ಉಡುಪಿ,ಸೆ.10: ಕಾಲು ಮುರಿತಗೊಂಡು, ಚಿಕಿತ್ಸೆ ಪಡೆಯಲು ಅಸಹಾಯಕನಾಗಿ, ನರ್ಮ್ ಬಸ್ಸು ನಿಲ್ದಾಣದಲ್ಲಿ ದಿನಗಳ ಕಳೆಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶನಿವಾರ ನಡೆದಿದೆ. ಕಾರ್ಯಚರಣೆಯಲ್ಲಿ ನಗರ ಠಾಣೆಯ ಪೊಲೀಸರು ಭಾಗಿಯಾಗಿದ್ದರು. ರಕ್ಷಿಸಲ್ಪಟ್ಟ ಗಾಯಾಳು ದಾಖಲು ಪ್ರಕ್ರಿಯೆ ನಡೆಸುವಾಗ ಹೆಸರು ಬಸಯ್ಯ ಹಿರಿಕೊಪ್ಪ, ಧಾರವಾಡದ ನಿವಾಸಿ ಎಂದು ವಿಳಾಸ ನೀಡಿದ್ದು ಸಂಬಂಧಿಕರು ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಗಾಯಾಳುವಿನ ಗಾಯವು ಕೊಳೆತು ಗಬ್ಬುವಾಸನೆ ಹೊಡೆಯುತಿತ್ತು.ಬಸ್ಸುನಿಲ್ದಾಣದಲ್ಲಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ರೋಗಿಯು ಉದರ ಹಸಿವಿಗೆ ಬೀಕ್ಷಾಟನೆ ಮಾಡುತ್ತಿದ್ದನು.ರೋಗಿಯ ಅಸಹಾಯಕ ಪರಿಸ್ಥಿತಿ ಕಂಡು ಮರುಗಿದ ಸಾರ್ವಜನಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಒಳಕಾಡು ಅವರು ನೆರವಿಗೆ ಬಂದರು. ಕಾರ್ಯಚರಣೆ ನಡೆಸುವಾಗ ಬಸ್ಸು ನಿಲ್ದಾಣದಲ್ಲಿ ಒಂದಿಷ್ಟು ಭಿಕ್ಷುಕರು ಭಿಕ್ಷಾಟನೆ ನಡೆಸುತ್ತಿರುವುದು ಕಂಡುಬಂದಿತು. ಭಿಕ್ಷಾಟನೆ ನಿಷೇಧ ಕಾಯ್ದೆಯು ಜಾರಿಯಲ್ಲಿದೆ. ಇಲಾಖೆಯವರು ಬಸ್ಸು ನಿಲ್ದಾಣದಲ್ಲಿ ನೆಲೆಕಂಡಿರುವ ಭಿಕ್ಷುಕರನ್ನು ವಶಕ್ಕೆ ಪಡೆದು, ಭಿಕ್ಷುಕರ ಪುರ್ನವಸತಿ ಕೇಂದ್ರಕ್ಕೆ ದಾಖಲು ಪಡಿಸಬೇಕೆಂದು ಒಳಕಾಡುವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!