ಜೆಸಿಐ ಗಣೇಶಪುರ: ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಜೆಸಿಐ ಗಣೇಶಪುರ, ಭಾರತಿ ಆಂಗ್ಲ ಮಾಧ್ಯಮ ಶಾಲೆ, ಕುಳಾಯಿ ಮತ್ತು ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸ ಲಾಗಿತ್ತು. ಶಿಬಿರದಲ್ಲಿ ಇಸಿಜಿ, ದಂತ, ನೇತ್ರ ತಪಾಸಣೆ ನಡೆಸಲಾಯಿತು.

ಆರೋಗ್ಯ ಮೌಲ್ಯಮಾಪನಗಳ ಜೊತೆಗೆ, ವೈದ್ಯರು ವಿದ್ಯಾರ್ಥಿಗಳ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ಒತ್ತಡ ನಿರ್ವಹಣೆಯ ಕುರಿತು ತರಬೇತಿಯನ್ನು ನೀಡಿದರು. ಈ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಜೆಸಿಐ ಗಣೇಶ್‌ಪುರದ ಅಧ್ಯಕ್ಷರಾಗಿರುವಂತಹ ಜೆಸಿ ಸನತ್ ಕುಮಾರ್ ನಾಯ್ಕ್, ಭಾರತಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷರಾಗಿರುವಂತಹ ಆದರ್ಶ ಶೆಟ್ಟಿ, ಎಂ ಡಿ ಎಸ್ ಕಾಲೇಜಿನ ಪ್ರಾಂಶುಪಾಲರಾದಂತಹ ರಾಧಿಕಾ ಉಪಸ್ಥಿತರಿದ್ದ ಹಾಗೂ ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಹಾಸಿಗೆ, ನೆಬ್ಯುಲೈಸರ್‌ ಮತ್ತು ಆಮ್ಲಜನಕ ಇನ್ಹೇಲರ್‌ಗಳನ್ನು ಆಶಾ ಕಿರಣ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಲಾಯಿತು.

ಈ ಕೊಡುಗೆಯು ಮಕ್ಕಳ ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಬೆಂಬಲಿಸುವ ಮತ್ತು ಅವರ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯೊಂದಿಗೆ, ಜೆಸಿಐ ಗಣೇಶಪುರದ ಅಧ್ಯಕ್ಷರಾದಂತಹ ಜೆಸಿ ಸನತ್ ಕುಮಾರ್ ನಾಯ್ಕ್ ಇವರು ಮಕ್ಕಳ ಸಲಹಾ ಕೇಂದ್ರದ ನಿರ್ದೇಶಕಿ ಆಗಿರುವಂತಹ ಪುಷ್ಪ ಇವರಿಗೆ ಹಸ್ತಾಂತರಿಸಿದರು. ಜೆಸಿಐ ಗಣೇಶಪುರದ ಪೂರ್ವಾಧ್ಯಕ್ಷರುಗಳು ಆದಂತಹ ಜೆಸಿ ಶ್ರೀಶ ಕರ್ಮರನ್ ಮತ್ತು ಜೆಸಿ ಸಂಪತ್ ಕುಮಾರ್ ಅವರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!