ಉದ್ಯಾವರ: ವಿಮಲಾ ಆರ್.ಸಾಲ್ಯಾನ್ ನಿಧನ

ಉದ್ಯಾವರ: ಉದ್ಯಾವರದಲ್ಲಿ ಹಲವು ವರ್ಷಗಳಿಂದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಇದರ ಮಾಲಕಿ ವಿಮಲಾ ಆರ್.ಸಾಲ್ಯಾನ್ (76) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಉದ್ಯಾವರದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಇದರ ಮಾಲಕಿಯಾಗಿದ್ದ ಇವರು, ಜಯಪುರದಲ್ಲಿರುವ ನವೀನ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಗಣೇಶ್ ಬಿಲ್ಡರ್ಸ್ ಇದರಲ್ಲಿಯೂ ಸಹ ಪಾಲುದಾರರಾಗಿದ್ದರು.

ಪತಿ ರಘುನಾಥ್ ಸಾಲ್ಯಾನ್ ಸಹಿತ ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!