ಜೆಸಿಐ ಶಂಕರಪುರ ಜಾಸ್ಮಿನ್: ಜೈತ್ರ ಜೆಸಿ ಸಪ್ತಾಹಕ್ಕೆ ಚಾಲನೆ
ಶಿರ್ವ: ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹಕ್ಕೆ ಇಂದು ಚಾಲನೆ ನೀಡಲಾಯಿತು.
ಜೆಸಿ ಸಪ್ತಾಹದ ಮೊದಲ ದಿನವಾದ ಇಂದು ನಮ್ಮ ಅರೋಗ್ಯ ಹಿತ ದೃಷ್ಟಿಯಿಂದ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯೋಗ ಶಿಕ್ಷಕಿ ಕುಮಾರಿ ಸುಮಿತ್ರ ಇವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜೆಸಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು, ಕಾರ್ಯದರ್ಶಿ ಜೆಸಿ ಪ್ರವೀಣ್ ಪೂಜಾರಿ ಧನ್ಯವಾದಗೈದರು.