ಶೀಘ್ರದಲ್ಲಿಯೇ ರಾಜ್ಯ ರಾಜಧಾನಿಯಲ್ಲಿ ಮಹಾಲಕ್ಷ್ಮೀ ಕೋ ಓ.ಬ್ಯಾಂಕ್ ಶಾಖೆ ಪ್ರಾರಂಭ: ಯಶ್‌ಪಾಲ್ ಸುವರ್ಣ

ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2022-23ರ ಆರ್ಥಿಕ ವರ್ಷದ 45ನೇ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಜರುಗಿತು.

ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನಿರಂತರ 14 ವರ್ಷಗಳಿಂದ ಅತಿಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಕಾರ್ಯಕ್ಷೇತ್ರವನ್ನು ಹೊಂದಿದ್ದು, ಶೀಘ್ರದಲ್ಲಿಯೇ ಬೆಂಗಳೂರು ಮಹಾನಗರಕ್ಕೂ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಶಾಖೆ ಆರಂಭಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣ ಎಂದರು. ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ರೂ. 15.24 ಕೋಟಿ ವ್ಯವಹಾರಿಕ ಲಾಭ ಗಳಿಸಿದ್ದು, ಹಾಗೂ ಅನುವು ಮಾಡಿದ ನಂತರ ರೂ. 5.92 ಕೋಟಿ ನಿವ್ವಳ ಲಾಭ ಗಳಿಸಿದ್ದು, 2022-23ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿಯು ರೂ. 473 ಕೋಟಿಗೆ ಹಾಗೂ ಸಾಲ ಮತ್ತು ಮುಂಗಡವು ರೂ. 338 ಕೋಟಿಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು ರೂ. 9,463 ಕೋಟಿ, ದುಡಿಯುವ ಬಂಡವಾಳವು ರೂ. 552 ಕೋಟಿಗೆ ಏರಿಕೆಯಾಗಿದ್ದು, ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವುದನ್ನು ವಿವರಿಸಿದರು.

ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಬ್ಯಾಂಕ್ ‘ಎ’ ದರ್ಜೆಯಲ್ಲಿ ವರ್ಗೀಕೃತವಾಗಿದ್ದು, ಬ್ಯಾಂಕಿನ ಸದಸ್ಯರಿಗೆ ಶೇ.15 ಡಿವಿಡೆಂಡ್‌ನ್ನು ಸರ್ವಾನುಮತದಿಂದ ಘೋಷಿಸಿದ್ದು, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದವರಿಗೆ ಹಾಗೂ ಮಹಾಸಭೆಯಲ್ಲಿ ವ್ಯಕ್ತವಾದ ಅಭಿವೃದ್ಧಿಪರ ಸಲಹೆ ಸೂಚನೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಮುಂಬರುವ ವರ್ಷಗಳಲ್ಲಿಯೂ ಸಹ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಅಧ್ಯಕ್ಷರು ಕೋರಿದರು.ಬ್ಯಾಂಕಿನ ನಿರಂತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬ್ಯಾಂಕಿನ ಸಾಧನೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಅಂತರಾಷ್ಟಿçÃಯ ದೇಹದಾರ್ಢ್ಯಪಟು ನಿತ್ಯಾನಂದ ಕೋಟ್ಯಾನ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ಕುಮಾರಿ ರಕ್ಷಿತಾ ಜೆ. ಹಾಗೂ ವಯೋನಿವೃತ್ತಿ ಹೊಂದಿದ ಬ್ಯಾಂಕಿನ ಸಿಬ್ಬಂದಿಗಳಾದ ಪ್ರಭಾಕರ ಸಾಲ್ಯಾನ್, ನರೇಂದ್ರ ಸಾಲ್ಯಾನ್ ರವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮೀನುಗಾರ ಮುಖಂಡರಾದ ಸಾಧು ಸಾಲ್ಯಾನ್,ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ರಾಮಚಂದ್ರ ಕುಂದರ್, ಸತೀಶ್ ಕುಂದರ್, ಶಿವಪ್ಪ ಕಾಂಚನ್, ಗುಂಡು ಅಮೀನ್, ಮೋಹನ್ ಬೆಂಗ್ರೆ, ರತ್ನಾಕರ ಸಾಲ್ಯಾನ್, ಬೇಬಿ ಸಾಲ್ಯಾನ್, ಉಷಾ ರಾಣಿ, ರತ್ನಾಕರ ಸಾಲ್ಯಾನ್, ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲ್ಯಾನ್, ನಿರ್ದೇಶಕರುಗಳಾದ ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಶಿವರಾಮ ಕುಂದರ್, ವನಜಾ ಜೆ ಪುತ್ರನ್, ವನಜ ಎಚ್. ಕಿದಿಯೂರು, ಸದಾನಂದ ಬಳ್ಕೂರು, ಮನೋಜ್ ಎಸ್. ಕರ್ಕೇರ, ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ, ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾದ ಜಗದೀಶ್ ಮೊಗವೀರ ಉಪಸ್ಥಿತರಿದ್ದರು.


ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಮುಂದಿನ 5 ವರ್ಷಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಗ್ರಾಹಕರೊನ್ನೊಳಗೊಂಡು 1000 ಕೋಟಿ ಠೇವಣಿ ಸಂಗ್ರಹಣೆಯ ಗುರಿ ಹೊಂದಿದೆ:-ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷರು


Leave a Reply

Your email address will not be published. Required fields are marked *

error: Content is protected !!