ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ- ಆ.ಸೊಸೈಟಿ ಉದ್ಘಾಟನೆ

ಉಡುಪಿ, ಸೆ.9: ಸಹಕಾರಿ ರಂಗವು ಪ್ರಾಮಾಣಿಕತೆ, ಬದ್ದತೆ ಮೂಲಕ ಕಾರ್ಯನಿರ್ವಹಿಸಿದರೆ ಯಶಸ್ಸು ಕಾಣಬಹುದು. ಸಹಕಾರಿ ತತ್ವದಡಿ ಆರ್ಥಿಕತೆಯ ಚಲಾವಣೆಯಾದರೆ ಸಮಾಜವು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ಎಂಜಿಎಂ ಕಾಲೇಜು ಎದುರಿನ ಶ್ರೀ ಗಣೇಶ್ ಬಿಲ್ಡಿಂಗ್‌ನ ನೆಲಮಹಡಿಯಲ್ಲಿ ಶುಕ್ರವಾರ ನೂತನವಾಗಿ ಆರಂಭಗೊಂಡ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಂಘವು ಎಲ್ಲ ಧರ್ಮದವರ ಸಹಕಾರ ಪಡೆದು ಎಲ್ಲ ವರ್ಗದ ಜನರಿಗೆ ಆರ್ಥಿಕ ಸಹಾಯ ಒದಗಿಸಿದಾಗ ಸಮಾಜದ ಅಭಿವೃದ್ಧಿಯಾಗಲಿದೆ ಎಂದರು.

ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಕಲ್ಯಾಣಪುರ ಮಿಲಾಗ್ರಿಸ್ ಕೆಥಡ್ರಲ್ ಚರ್ಚನ ಧರ್ಮಗುರು ರೆ. ಫಾ| ವಲೇರಿಯನ್ ಮೆಂಡೋನ್ಸಾ ಅವರು, ಹಣಕಾಸು ಸಂಸ್ಥೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಸಾಮಾಜಿಕ ಸೇವೆಯನ್ನು ನೀಡುತ್ತಿರಬೇಕು, ಸಂಘವು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶೀರ್ವಚನ ನೀಡಿದರು.

ಸಂಘದ ಪ್ರಧಾನ ಕಚೇರಿ ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಶ್ವಾಸ ಮತ್ತು ನಂಬಿಕೆಯ ಆಧಾರದ ಮೇಲೆ ನಿಂತಿರುವ ಆರ್ಥಿಕ ಸಂಸ್ಥೆಯ ಬೆಳವಣಿಗೆಗೆ ಗ್ರಾಹಕರಿಗೆ ನೀಡುವ ತೃಪ್ತಿದಾಯಕ ಸೇವೆ ಕಾರಣವಾಗಲಿದೆ. ನೂತನ ಸಂಘದ ಉಗಮವು ಸಹಕಾರಿ ಕ್ಷೇತ್ರಕ್ಕೆ ಇನ್ನೊಂದು ಗರಿ ಸೇರಿಸಿದಂತಾಗಿದೆ ಎಂದರು.

ಭದ್ರತಾ ಕೊಠಡಿಯನ್ನು ಅಮ್ಮುಂಜೆ ಸಿರಿಯನ್ ಚರ್ಚ್‌ನ ಈ ಫಾ| ಲಾರೆನ್ಸ್ ಡೇವಿಡ್ ಕ್ರಾಸ್ತಾ ಉದ್ಘಾಟಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ. ಅನಾವರಣಗೊಳಿಸಿದರು. ಲಯನ್ ಜಿಲ್ಲಾ ಗವರ್ನರ್ ಡಾ|ನೇರಿ ಕರ್ನೆಲಿಯೋ ಮಾತನಾಡಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜಾ ಅವರು ಸಹಕಾರಿ ಕ್ಷೇತ್ರದಲ್ಲಿ ಏಳು ವರ್ಷಗಳ ಕಾಲ ದುಡಿದ ಅನುಭವದಿಂದ ತಾವೇ ಸಹಕಾರಿ ಕ್ಷೇತ್ರವನ್ನು ಹುಟ್ಟು ಹಾಕಿ ಅದನ್ನು ಮುನ್ನಡೆಸುವ ಶಕ್ತಿ ಹೊಂದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಯಾವ ರೀತಿಯಲ್ಲಿ ಉತ್ತಮ ಸೇವೆ ನೀಡಬೇಕು ಎಂಬ ಮಾಹಿತಿಗಳನ್ನು ತಿಳಿದು ಅವರು ಮಾದರಿಯಾದ ಸಂಸ್ಥೆಯನ್ನು ಮುನ್ನಡೆಸುವ ಅಭಿಲಾಷೆ ಹೊಂದಿದ್ದಾರೆ. ಸಮಾಜದ ಪ್ರತಿಯೊಬ್ಬರೂ ನೂತನ ಸೊಸೈಟಿಯ ಗ್ರಾಹಕರಾಗಲು ವಿನಂತಿಸಿಕೊಂಡರು.

ಸಂಸ್ಥೆ ವತಿಯಿಂದ ಯು.ಟಿ. ಖಾದರ್ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷ ಜೆಸಿಂತಾ ‘ಸೋಜಾ, ಪ್ರಶಾಂತ ಕುಮಾರ್, ಶಾಖಾ ಪ್ರಬಂಧಕಿ ಫೆಲ್ಸಿ ಡಿ’ಸೋಜಾ ಅಜಯ ಕುಮಾರ್, ಜೂದ್ ನೆಲ್ಸನ್ ಡಿ’ಸೋಜಾ, ಪ್ರಶಾಂತಿ ಪ್ರಿಯಾ, ಅಜಿತ್, ಪ್ರತಿಭಾ ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕ ಹಾಗೂ ಎಂಡಿ ಜೀವನ್‌ ಡಿ’ಸೋಜಾ ಸ್ವಾಗತಿಸಿದರು. ಶೈಲೇಶ್ ಹಳದೀಪುರ ನಿರೂಪಿಸಿ, ಲೆಕ್ಕಕೋಶಾಧಿಕಾರಿ ಕುಮಾರ್ ಎಚ್‌.ಎನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!