ಬೈಂದೂರು: ವಿವಾಹಿತ ಮಹಿಳೆ ನಾಪತ್ತೆ
ಬೈಂದೂರು: ವಿವಾಹಿತ ಮಹಿಳೆ ಸುನೈನಾ (23) ಸೆ. 18ರಂದು ಮುಂಜಾನೆ 4.30೦ಕ್ಕೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ನೆರೆಕರೆ, ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯ ಚಹರೆ: ಎತ್ತರ 5..4 ಅಡಿ, ಗೋದಿ ಮೈಬಣ್ಣ, ಕೆಂಪು ಬಣ್ಣದ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್ , ಕನ್ನಡ, ಉರ್ದು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಸುಳಿವು ಪತ್ತೆಯಾದರೆ ಬೈಂದೂರು ಠಾಣೆ 08254-251033 ಅಥವಾ ವೃತ್ತ ನಿರೀಕ್ಷಕರ 08254251031 ಕಛೇರಿಗೆ ಮಾಹಿತಿ ನೀಡಲು ಕೋರಲಾಗಿದೆ.