ಉಡುಪಿ: ದಲಿತ ಚಳವಳಿ ಕಟ್ಟಿ ಬೆಳೆಸಿದ ಪ್ರಮುಖರಾದ ಗುರುವಪ್ಪ ಮಾಸ್ತರ್ ಇನ್ನಿಲ್ಲ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ದಲಿತ ಚಳವಳಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗುರುವಪ್ಪ ಮಾಸ್ತರ್(90) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶನಿವಾರ ನಿಧನರಾಗಿದ್ದಾರೆ.
ಮೃತರ ಹುಟ್ಟೂರು ಕೆಮ್ಮಣ್ಣು ಸಮೀಪದ ಗುಜ್ಜರ್ ಬೆಟ್ಟು. ಪ್ರಸ್ತುತ 30 ವರ್ಷಗಳಿಂದ ಹಿರಿಯಡ್ಕದಲ್ಲಿ ನೆಲೆಸಿದ್ದರು.
ಅವಿಭಜಿತ ದ.ಕ ಜಿಲ್ಲಾ ಅವಿಭಜಿತ ದಸಂಸದ ಕೋಶಾಧಿಕಾರಿಯಾಗಿ ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ಪಾಜಕ ಹೋರಾಟದಲ್ಲಿ,ಮಲ್ಪೆ ಮೀನುಗಾರಿಕಾ ಮಹಿಳೆಯರ ಸಹಕಾರ ಸಂಘ ಕಟ್ಟಿ ಬೆಳೆಸುವಲ್ಲಿ, ಜಿಲ್ಲಾ ಶಿವಸಮಾಜ ಸಂಘದ ಅಧ್ಯಕ್ಷರಾಗಿ, ಕಚ್ಚೂರು ಬಬ್ಬುಸ್ವಾಮಿ ಮೂಲಕ್ಷೇತ್ರದ ಅಭಿವೃದ್ಧಿಯಲ್ಲಿ ,ಕೋಡಿ ಕಂಡಾಳ ಬಬ್ಬುಸ್ವಾಮಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಗುರುವಪ್ಪ ಮಾಸ್ತರ್ ರ ಸೇವೆ ಅಪಾರವಾಗಿತ್ತು. ಮೃತರು ಎರಡು ಪುತ್ರ ,ಒಂದು ಪುತ್ರಿಯನ್ನು ಅಗಲಿದ್ದಾರೆ.
ನಾಳೆ ಉಡುಪಿಯ ಬನ್ನಂಜೆ ಯಲ್ಲಿರುವ ಜಿಲ್ಲಾ ಶಿವಸಮಾಜ ಸಂಘದಲ್ಲಿ ವಿಠಲ್ ದಾಸ್ ಬನ್ನಂಜೆಯವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ11ಗಂಟೆಗೆ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿದೆ.