ಕಿಶನ್ ಹೆಗ್ಡೆ ಕೊಲೆ ಪ್ರಕರಣ: ಐವರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಹಿರಿಯಡ್ಕ ಪೇಟೆಯಲ್ಲಿ ಹಾಡು ಹಗಲಲ್ಲೇ ರೌಡಿ ಶೀಟರ್ ಇನ್ನಾ ಕಿಶನ್ ಹೆಗ್ಡೆ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಮತ್ತು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರರವರ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಲಾಗಿದ್ದು ಕೊಲೆ ನಡೆದ ಕೆಲವೇ ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನ ಜೋಕಟ್ಟೆ ನಿವಾಸಿ ಮನೋಜ್ ಕುಲಾಲ್(37), ಕಾಟಿಪಳ್ಳದ ಕೃಷ್ಣಾಪುರ ನಿವಾಸಿ ಚಿತ್ತರಂಜನ್ ಪೂಜಾರಿ (27 )ಮಂಗಳೂರಿನ ಪುದ ನಿವಾಸಿ ಚೇತನ್ ಯಾನೆ ಚೇತು ಪಡೀಲ್ (32) ,ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನ ನಿವಾಸಿ ರಮೇಶ್ ಪೂಜಾರಿ (38 ), ಸುರತ್ಕಲ್ ನ ಕಾಟಿಪಳ್ಳ ನಿವಾಸಿ ದೀಕ್ಷಿತ್ ಶೆಟ್ಟಿ ಯಾನೆ ದೇವಿ ಪ್ರಸಾದ್ (29 )ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ ಈ ಮೊದಲೇ ಬೇರೆ ಬೇರೆ ಠಾಣೆಗಳಲ್ಲಿ ಕೊಲೆ ಬೆದರಿಕೆ ಸೇರಿದಂತೆ ಅನೇಕ ಕೇಸುಗಳು ದಾಖಲಾಗಿದೆ , ಈ ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯವೇ ಕರಣ ಎನ್ನಲಾಗಿದ್ದು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರೂ ಕಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿ ಮನೋಜ್ ವಿರುದ್ದ ಮಂಗಳೂರು, ಸುರತ್ಕಲ್, ಪಣಂಬೂರು, ಕಾವೂರು, ಬರ್ಕೆ, ಮುಲ್ಕಿ, ಬಜಪೆ ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವಬೆದರಿಕೆ ಸಹಿತ ಒಟ್ಟು 17 ಪ್ರಕರಣಗಳು, ಚಿತ್ತರಂಜನ್ ಪೂಜಾರಿ ವಿರುದ್ಧ ಸುರತ್ಕಲ್, ಮುಲ್ಕಿ ಕಾರ್ಕಳ ನಗರ ಠಾಣೆಗಳಲ್ಲಿ ಹಲ್ಲೆ, ಜೀವಬೆದರಿಕ, ಶಸಸ್ತ ಕಾಯ್ದೆ ಸಹಿತ ಒಟ್ಟು 15 ಪ್ರಕರಣಗಳು, ಚೇತನ್ ಪಡೀಲ್ ವಿರುದ್ಧ ಕದ್ರಿ, ಬಜಪೆ, ಕಾವೂರ್ ಠಾಣೆಗಳಲ್ಲಿ ಕೊಲೆ, ಹಲ್ಲೆ. ಜೀವಬೆದರಿಕೆ ಶಸ್ತ್ರಾಸ್ತ್ರ ಕಾಯ್ದು ಸಹಿತ ಒಟ್ಟು 15 ಪ್ರಕರಣಗಳು ದಾಖಲಾಗಿದೆ, ರಮೇಶ್ ಪೂಜಾರಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಆರೋಪಿ ದೀಕ್ಷಿತ್ ಶೆಟ್ಟಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ವೃತ್ತ ಕಛೇರಿಯ ಸಿಬ್ಬಂದಿಗಳಾದ ಎಎಸ್‌ಐ ಕೃಷ್ಣಪ್ಪ, ಹೆಚ್ ಸಿ ವಾಸು ಪೂಜಾರಿ, ಗಣೇಶ್, ಪ್ರದೀಪ, ಪಿಸಿ ರವಿ, ಚಾಲಕ ಶೇಖರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಮತ್ತು ಕಾಪು ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ಹಾಗೂ ಅವರ ತಂಡ, ಬ್ರಹ್ಮಾವರ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ, ಸಿಬ್ಬಂದಿಗಳಾದ ದಿಲೀಪ್ ಸತೀಶ್, ಚಾಲಕ ಅಣ್ಣಪ್ಪ, ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ. ಚಾಲಕ ಮಂಜು, ಹಿರಿಯಡ್ಕ ರಾಣಾ ಪಿಎಸ್‌ಐ ಸುಧಾಕರ ತೋನ್ಸೆ, ಸಿಬ್ಬಂದಿಗಳಾದ ಎಎಸ್ಐ ಗಂಗಪ್ಪ, ಜಯಂತಿ, ಪರಮೇಶ್ವರ, ಸಿಬ್ಬಂದಿ ಅವರು ದಿನೇಶ್, ರಘು, ಸಂತೋಷ, ಉದಯ ಕಾಮತ್, ಕುಮಾರ್, ನಿತಿನ್, ಹರೀಶ್, ಇಂದ್ರೇಶ್, ಭೀಮಪ್ಪ ಹಡಪದ, ಚಾಲಕ ಆನಂದ ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿದ್ದಾರೆ. ಕ್ರತ್ಯ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.