ತುಳು ಅಕಾಡೆಮಿಯಿಂದ ಪೋಸ್ಟ್ ಕಾರ್ಡ್‌ನಲ್ಲಿ “ತುಳು ಕಬಿತೆ ಪಂಥ”

ಮಂಗಳೂರು(ಉಡುಪಿ ಟೈಮ್ಸ್ ವರದಿ): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಿವಿಧ ಸೇವಾ ಸಂಸ್ಥೆಗಳೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಪೋಸ್ಟ್ ಕಾರ್ಡ್‌ನಲ್ಲಿ ತುಳು ಕಬಿತೆ ಪಂಥ-2020ನ್ನು ಆಯೋಜಿಸಲಾಗಿದೆ. ಕಿನ್ನಿಗೋಳಿಯ ಯುಗಪುರುಷ ಮತ್ತು ರೋಟರಿ ಕ್ಲಬ್ ಕಿನ್ನಿಗೋಳಿಯ ಜಂಟಿ ಸಹಕಾರದಲ್ಲಿ ನಡೆಯಲಿದೆ.


ಸ್ಪರ್ಧೆಯ ವಿವರ :ಕವಿತೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವರಚಿತ ಹಾಗೂ ಎಲ್ಲೂ ಪ್ರಕಟವಾಗದೇ ಇರುವ ಹೊಸ ಕವನವನ್ನು ಪೋಸ್ಟ್ ಕಾರ್ಡ್‌ನಲ್ಲಿಯೇ ಬರೆದು ಕಳುಹಿಸಬೇಕು, ಆಯ್ದ ಉತ್ತಮ ಕವನಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ 10 ಮಂದಿಗೆ ಪ್ರೋತ್ಸಾಹಕ ಬಹುಮಾನ ಅರ್ಹತಾ ಪತ್ರವನ್ನು ನೀಡಲಾಗುವುದು. ಒರ್ವ ಸಾಹಿತಿಗೆ ಒಂದು ಕವನ ಬರೆದು ಕಳುಹಿಸಲು ಅವಕಾಶ, ಆಯ್ಕೆಗೊಂಡ ಕವನಗಳನ್ನು ತುಳು   ಸಾಹಿತ್ಯ ಅಕಾಡೆಮಿಯ “ಮದಿಪು” ತ್ರೈಮಾಸಿಕ ಹಾಗೂ ಕಿನ್ನಿಗೋಳಿಯ “ಯುಗಪುರುಷ” ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಅಕ್ಟೋಬರ್ 10 ಕೊನೆಯ ದಿನಾಂಕವಾಗಿದ್ದು. ಕವನವನ್ನು :ತುಳು ಕಬಿತೆ ಪಂಥ- 2020, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, “ತುಳು ಭವನ” ಅಶೋಕ ನಗರ ಅಂಚೆ, ಮಂಗಳೂರು- 575008 ಗೆ ಕಳುಹಿಸಬೇಕು ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ಸದಸ್ಯ ಕಾರ್ಯಕ್ರಮ ಸಂಚಾಲಕರಾಗಿರುವ ನರೇಂದ್ರ ಕೆರೆಕಾಡು (9663393374) ರನ್ನು ಸಂಪರ್ಕಿಸಬಹುದು. ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!