‘ಪಿಎಂ ವಿಶ್ವಕರ್ಮ’ ಯೋಜನೆ, ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ: 13,000 ಕೋಟಿ ರೂಪಾಯಿ ಮೌಲ್ಯದ “ಪಿಎಂ ವಿಶ್ವಕರ್ಮ” ಯೋಜನೆ ಹಾಗೂ  32,500 ಕೋಟಿ ಮೌಲ್ಯದ ಹೊಸ ರೈಲ್ವೆ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.

ಪಿಎಂ ವಿಶ್ವಕರ್ಮ ಯೋಜನೆಯಿಂದ ದೇಶದ 30 ಲಕ್ಷ ಕರಕುಶಲಕರ್ಮಿಗಳಿಗೆ ಲಾಭವಾಗಲಿದೆ. ಅವರಿಗೆ ಕೇವಲ 5 ಪರ್ಸೆಂಟ್ ವಾರ್ಷಿಕ ಬಡ್ಡಿದರದಲ್ಲಿ 1 ಲಕ್ಷ ರೂ.ವರೆಗೂ ಮೊದಲ ಹಂತದ ಸಾಲ ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಯೋಜನೆಗಾಗಿ ಸರ್ಕಾರ 13,000 ಕೋಟಿ ರೂ. ಮಿಸಲಿಟ್ಟಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ, ಟೂಲ್​ಕಿಟ್, ಡಿಜಿಟಲ್ ವಹಿವಾಟು, ಮಾರ್ಕೆಟಿಂಗ್ ಇತ್ಯಾದಿ ಪ್ರೋತ್ಸಾಹಗಳನ್ನು ಕರಕುಶಲಕರ್ಮಿಗಳಿಗೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

32,500 ಕೋಟಿ ಮೌಲ್ಯದ ಹೊಸ ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಏಳು ಯೋಜನೆಗಳಿಗೆ ಅನುಮೋದನೆ ನೀಡಿದೆ. 32,500 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ-ಟ್ರ್ಯಾಕಿಂಗ್‌ ಕಾರ್ಯಾಚರಣೆಗಳನ್ನು ಸರಾಗಗೊಳಿಸುವ ಮೂಲಕ ದಟ್ಟಣೆ ಕಡಿಮೆ ಮಾಡುವುದು, ಭಾರತೀಯ ರೈಲ್ವೆಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಯೋಜನೆಗಳು ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಒಂಬತ್ತು ರಾಜ್ಯಗಳ 35 ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಯು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ನೆಟ್‌ವರ್ಕ್ ಅನ್ನು 2339 ಕಿಮೀ ಹೆಚ್ಚಿಸುವ ಸಾಧ್ಯತೆಯಿದೆ. ಇದು ಮೇಲೆ ತಿಳಿಸಿದ ರಾಜ್ಯಗಳಲ್ಲಿ 7.06 ಕೋಟಿ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯಿದೆ.

2 thoughts on “‘ಪಿಎಂ ವಿಶ್ವಕರ್ಮ’ ಯೋಜನೆ, ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು

Leave a Reply

Your email address will not be published. Required fields are marked *

error: Content is protected !!