ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ: ಐವರ ಬಂಧನ
ಹಿರಿಯಡ್ಕ: (ಉಡುಪಿ ಟೈಮ್ಸ್ ವರದಿ) ದೇವರಿಗೆ ಕೈಮುಗಿಯಲೆಂದು ಹೊರಟ ರೌಡಿ ಶೀಟರ್ನನ್ನು ಹಾಡುಗಲೇ ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದು ಇಂದು ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಹತ್ಯೆಗೆ ಕೊಡಿಕೆರೆ ಮನೋಜ್ ಮತ್ತು ಕಿಶನ್ ಹೆಗ್ಡೆ ನಡುವಿನ ಹಣಕಾಸಿನ ವೈಷ್ಯಮ್ಯವೇ ಕಾರಣವೆಂದು ತಿಳಿದು ಬಂದಿದೆ.
ಗುರುವಾರ ಮಧ್ಯಾಹ್ನ ಪಡುಬಿದ್ರೆ ಇನ್ನಾದ ರೌಡಿ ಶೀಟರ್ ಕಿಶನ್ ಹೆಗ್ಡೆ(42)ಯನ್ನು ಹಿರಿಯಡ್ಕ ಶ್ರೀವಿರಭದ್ರ ದೇವಸ್ಥಾನದ ಪಕ್ಕವೇ ಎರಡು ಕಾರಿನಲ್ಲಿ ಬಂದು ದುಷ್ಕರ್ಮಿಗಳು ಹತ್ಯೆಯನ್ನು ಮಾಡಿ ಪರಾರಿಯಾಗಿದ್ದರು.
ಕಿಶನ್ ಹೆಗ್ಡೆ ತನ್ನ ಸ್ನೇಹಿತ ದಿವ್ಯಾರಾಜ್ ಮತ್ತು ಸಂಬಂಧಿ ಹರಿಪ್ರಸಾದ್ ಜೊತೆ ನ್ಯಾಯಾವಾದಿ ಕಛೇರಿಯಿಂದ ಕಾರ್ಕಳ ಕಡೆ 2 ಗಂಟೆಗೆ ಹೊರಟಿದ್ದರು, ಆಗ ಸ್ನೇಹಿತ ದಿವ್ಯಾರಾಜ್ ಮಣಿಪಾಲದಲ್ಲಿ ಊಟ ಮಾಡುವ ಎಂದಿದ್ದರು. ಆಗ ಕಿಶನ್ ಇಲ್ಲಿ ಬೇಡ ನಾವು ಮೊದಲು ಹಿರಿಯಡ್ಕ ದೇವರ ದರ್ಶನವಾಗಿ ಮತ್ತೆ ಊಟ ಮಾಡುವ ಎಂದು ಹಿರಿಯಡ್ಕ ಕಡೆ ಹೊರಟಿದ್ದರು. ಉಡುಪಿಯಿಂದಲೇ ಮನೋಜ್ ಕೋಡಿಕೆರೆ ಮತ್ತು ನಾಲ್ಕು ಜನರಿದ್ದ ತಂಡ ಇನ್ನೋವ ಮತ್ತು ಮಾರುತಿ ರಿಡ್ಜ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು.
ಮಧ್ಯಾಹ್ನ 2.25 ರ ಸುಮಾರಿಗೆ ಹಿರಿಯಡ್ಕ ತಲುಪುತ್ತಿದ್ದಂತೆ ಇನ್ನೋವಾ ಕಾರನ್ನು ಕಿಶನ್ ಕಾರಿಗೆ ಅಡ್ಡವಾಗಿ ಇಟ್ಟು, ತಕ್ಷಣ ತಲವಾರು ಹಾಗು ಸುತ್ತಿಗೆಯಲ್ಲಿ ಕಾರಿನ ಮುಂಭಾಗ ಮತ್ತು ಬಲ ಭಾಗದ ಗಾಜನ್ನು ದುಷ್ಕರ್ಮಿಗಳು ಒಡೆದಿದ್ದರು. ತಕ್ಷಣ ದಿವ್ಯಾರಾಜ್ ಮತ್ತು ಸಂಬಂಧಿ ಹರಿಪ್ರಸಾದ್ ಅಲ್ಲಿಂದ ರಕ್ಷಿಸಿಸಿಕೊಳ್ಳಲು ದೂರ ಓಡಿದ್ದರು, ನಂತರ ಕಿಶನ್ ಕೂಡ ಕಾರಿನಿಂದ ಇಳಿದು ದುಷ್ಕರ್ಮಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಂತೆ ಹಿಂದಿನಿಂದ ಸುತ್ತಿಗೆಯಲ್ಲಿ ತಲೆಗೆ ಬಲವಾಗಿ ಹೊಡೆಯಲಾಗಿದೆ.
ಒಂದೇ ಏಟಿಗೆ ಕುಸಿದ ಕಿಶನ್ ಅಲ್ಲೇ ಕುಸಿದು ಬಿದ್ದು, ಪ್ರಾಣ ಬಿಟ್ಟಿದ್ದಾನೆ.
ದುಷ್ಕಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆದರೆ ಸಿಸಿ ಕ್ಯಾಮರಾವು ಕೆಳಮುಖವಾಗಿದ್ದ ಕಾರಣ ದೃಶ್ಯದಲ್ಲಿ ಆರೋಪಿಗಳ ದೇಹದ ಭಾಗ ಪೂರ್ಣವಾಗಿಲ್ಲವೆಂದು ತಿಳಿದು ಬಂದಿದೆ.