ಉಡುಪಿ: ಮುಂಬೈನಿಂದ ಬಂದ 15 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಉಡುಪಿ: 15 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ಇಂದಿನ ಎಲ್ಲಾ ಪಾಸಿಟಿವ್ ಪ್ರಕರಣ ಮುಂಬೈನಿಂದ ಬಂದವರದ್ದಾಗಿದೆ. ಒಟ್ಟು ಜಿಲ್ಲೆಯಲ್ಲಿ 164 ಮಂದಿಗೆ ಸೋಂಕು ತಗಲಿದೆ.

ಉಡುಪಿ ಜಿಲ್ಲಾ ಪಂಚಾಯತ್ ಸಿಬ್ಬಂದಿಯ ಕೊರೋನಾ ಸೋಂಕು ವರದಿಯಲ್ಲಿ ನೆಗೆಟಿವ್ ಬಂದಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದೆಂದು ತಿಳಿದು ಬಂದಿದೆ.

ಇಂದು ಸೋಂಕು ಕಾಣಿಸಿಕೊಂಡ 15 ಮಂದಿಯಲ್ಲಿ ಇಬ್ಬರು ಮಕ್ಕಳು, 9 ಪುರುಷರು ಮತ್ತು ನಾಲ್ವರು ಮಹಿಳೆಯರಿದ್ದಾರೆ. ಸೋಂಕಿತರನ್ನು ಸ್ಥಳೀಯ ಕೋವಿಚ್ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ.


ಪ್ರಾಥಮಿಕ ಸಂಪರ್ಕಿತರನ್ನು ಪ್ರತ್ಯೇಕಿಸಲಾಗುತ್ತದೆ. ಜಿಲ್ಲೆಯ ಒಟ್ಟು 164 ಪ್ರಕರಣಗಳಲ್ಲಿ 139 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಉಳಿದಂತೆ ದುಬೈ, ತೆಲಂಗಾಣ, ಕೇರಳದಿಂದ ಬಂದವರಿಗೆ ಸೋಂಕು ಕಾಣಿಸಿಕೊಂಡಿದೆ. ಸ್ಥಳೀಯ ಆರು ಜನರಲ್ಲಿ ಸೋಂಕು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಸೋಂಕಿತ 164 ಜನರ ಪೈಕಿ 34 ಮಂದಿ 10 ವರ್ಷ ಪ್ರಾಯದೊಳಗಿನ ಮಕ್ಕಳಿದ್ದರೆ, 8 ಮಂದಿ 60 ವರ್ಷ ಪ್ರಾಯ ಮೇಲ್ಪಟ್ಟವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಗಿನ ಹೆಲ್ತ್ ಬುಲೆಟ್ ನ್ ನಲ್ಲಿ ನಿನ್ನೆ ಸಂಜೆಯಿಂದ ಇಂದು ಬೆಳಗಿನ ವರೆಗೂ ಬರೊಬ್ಬರಿ 178 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ರಾಯಚೂರು 62, ಯಾದಗಿರಿ 60, ಕಲಬುರಗಿ 15, ಉಡುಪಿ 15, ಬೆಂಗಳೂರು 9, ಚಿಕ್ಕಬಳ್ಳಾಪುರ 4, ದಾವಣಗೆರೆ 4, ಮೈಸೂರು 2, ಮಂಡ್ಯ 2, ಶಿವಮೊಗ್ಗ 1, ಬೆಂಗಳೂರು ಗ್ರಾಮಾಂತರ 1, ಚಿತ್ರದುರ್ಗ 1, ಧಾರವಾಡ 1 ಕೊರೊನಾ ಸೋಂಕು ದೃಢಪಟ್ಟಿದೆ.

2711 ಸೋಂಕಿತರ ಪೈಕಿ 47 ಮಂದಿ ಮೃತಪಟ್ಟಿದ್ದಾರೆ. 869 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಲೇ ಇದ್ದು, ಒಂದೇ ದಿನ ಬರೋಬ್ಬರಿ 7,466 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. 

4ನೇ ಹಂತದ ಲಾಕ್’ಡೌನ್ ತೆರವಿಗೆ ದೇಶ ಸಜ್ಜಾಗಿರುವ ಹೊತ್ತಿನಲ್ಲೇ ಶುಕ್ರವಾರ ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದೆ. 

ಕಳೆದ 24 ಗಂಟೆಗಳಲ್ಲಿ 7,466 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಇದರಿಂದಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ. 

ಈ ನಡುವೆ 1,65 ಲಕ್ಷ ಸೋಂಕಿತರ ಪೈಕಿ ಈವರೆಗೂ 71, 105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರದೇಶದ ದೇಶದಲ್ಲಿನ್ನೂ 89987 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ನಿನ್ನೆ ಒಂದೇ 175 ಮಂದಿ ಸಾವನ್ನಪ್ಪುವುದರೊಂದಿಗೆ ಈ ವರೆಗೆ ವೈರಸ್’ಗೆ ಬಲಿಯಾದವರ ಸಂಖ್ಯೆ 4706ಕ್ಕೆ ತಲುಪಿದೆ. 

ಉಳಿದಂತೆ ಮಹಾರಾಷ್ಟ್ರದಲ್ಲಿ 2598, ದೆಹಲಿಯಲ್ಲಿ 1024, ತಮಿಳುನಾಡಿನಲ್ಲಿ 827, ಗುಜರಾತ್ ನಲ್ಲಿ 367, ಮಧ್ಯಪ್ರದೇಶದಲ್ಲಿ 192 ಹೊಸ ಪ್ರಕಱಣಗಳು ದಾಖಲಾಗಿವೆ

ಜಾಗತಿಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ
ಇದೇ ವೇಳೆ ಇತ್ತೀಚೆಗಷ್ಟೇ ಅತೀ ಹೆಚ್ಚು ಸೋಂಕಿತರ ಜಾಗತಿಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದ್ದ ಭಾರತ, ಇದೀಗ ಟರ್ಕಿಯನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೆ ಏರಿದೆ. 

ಮೇ.25ರಂದು 1.42 ಲಕ್ಷ ಸೋಂಕಿತರ ಮೂಲಕ ಇರಾನ್ ಹಿಂದಿಕ್ಕಿ ಭಾರತ ಟಾಪ್ 10ಕ್ಕೆ ಬಂದಿತ್ತು. ಆದಾದ 4 ದಿನದಲ್ಲಿ 18,000 ಕೇಸಿನೊಂದಿಗೆ ಮತ್ತೊಂದು ಸ್ಥಾನ ಮೇಲಕ್ಕೇರಿದೆ. 

Leave a Reply

Your email address will not be published. Required fields are marked *

error: Content is protected !!