ಸಂಸತ್ನಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ
ನವದೆಹಲಿ: ಸಂಸತ್ನಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಶೋಭಾ ಕರಂದ್ಲಾಜೆ, ರಾಹುಲ್ ಗಾಂಧಿ ನಡೆ ಬಹಳ ನೋವು ತಂದಿದೆ. ಇಂತಹ ಅಸಭ್ಯಾ ವರ್ತನೆಯನ್ನು ಸಂಸತ್ ಹಿಂದೆಂದೂ ಕಂಡಿಲ್ಲ ಎಂದರು.
ರಾಹುಲ್ ಗಾಂಧಿ ಸಂಸತ್ಗೆ ಭಾಷಣ ಮಾಡಲು ಬಂದಿದ್ದರು. ಇವರ ಭಾಷಣದ ಬಳಿಕ ಸಚಿವೆ ಸ್ಮೃತಿ ಇರಾನಿ ಮಾತಾಡಬೇಕಿತ್ತು. ತಮ್ಮ ಭಾಷಣ ಮುಗಿಸಿ ಹೊರ ಹೋಗುವ ಮುನ್ನ ರಾಹುಲ್ ಗಾಂಧಿ ಸ್ಮೃತಿ ಇರಾನಿಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟರು ಎಂದರು.
ಇನ್ನು, ತನ್ನ ತಾಯಿ ಮುಂದೆಯೇ ರಾಹುಲ್ ಗಾಂಧಿ ಹೀಗೆ ಮಾಡಿದ್ದಾರೆ. ಇದು ಯಾವ ಸಂಸ್ಕಾರ ಎಂದು ಗೊತ್ತಿಲ್ಲ. ನಾನು ಹಲವು ಕಾಂಗ್ರೆಸ್ ನಾಯಕರನ್ನು ಕಂಡಿದ್ದೇನೆ. ಸಂಸತ್ನಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಎಂದು ಕಂಡಿಲ್ಲ. ಈ ಬಗ್ಗೆ ಸ್ಪೀಕರ್ಗೆ ದೂರು ನೀಡಿದ್ದೇವೆ. ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದರು.