ಅಪರಾಧ ಪತ್ತೆ ದಳ ಬರ್ಖಾಸ್ತು- ಬಂಟ್ವಾಳ, ಉಡುಪಿ ನಗರ ಸಹಿತ 86 ಠಾಣೆ ಮೇಲ್ದರ್ಜೆಗೆ
ಬೆಂಗಳೂರು: ರಾಜ್ಯದಲ್ಲಿ ಒಟ್ಟು 86 ಸೂಕ್ಷ್ಮ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಸರಕಾರ ಆದೇಶ ನೀಡಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಡುಪಿ ಜಿಲ್ಲೆಯ ಉಡುಪಿ ನಗರ ಠಾಣೆ ಸೇರಿದೆ.
ಕೋಮು ಸೂಕ್ಷ್ಮ ಹಾಗೂ ಜನಸಂಖ್ಯೆಯ ಆಧಾರದಲ್ಲಿ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಹಾಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಐಬಿ ರದ್ದುಪಡಿಸಲಾಗಿದ್ದು, ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ಬರ್ಖಾಸ್ತುಗೊಳಿಸಲಾಗಿದೆ. ಅಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಗಳನ್ನು ಮೇಲ್ದರ್ಜೆಗೇರಿದ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ಬಂಟ್ವಾಳ ವೃತ್ತದಲ್ಲಿ ಒಟ್ಟು 4 ಠಾಣೆಗಳಿದ್ದು, ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಹಾಗೂ ಟ್ರಾಫಿಕ್ ಠಾಣೆ ಸೇರಿದೆ. ಬಂಟ್ವಾಳ ನಗರ ಠಾಣೆ ನೂತನ ಇನ್ಸ್ಪೆಕ್ಟರ್ ಆಗಿ ಮಂಗಳೂರು ಡಿಸಿಐಬಿ ಇನ್ಸ್ಪೆಕ್ಟರ್ ಆಗಿದ್ದ ಚೆಲುವರಾಜು ಅವರು ಅಧಿಕಾರ ಸ್ವೀಕರಿಸಿದ್ದಾರೆ.