ಸೆ.28 ಕರ್ನಾಟಕ ಬಂದ್: ಉಡುಪಿ ಸಿಪಿಐಎಂ ಬೆಂಬಲ

ಉಡುಪಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ, ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ರೈತ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆ, ಹೆದ್ದಾರಿ ತಡೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ, ಸೆ. 28ನೆ ತಾರಿಕಿನಂದು ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೋನ ಸಾಂಕ್ರಾಮಿಕ ರೋಗ ತಡೆಗಟ್ಟಲು ವಿಫಲವಾಗಿದ್ದು, ಈ ಸಂಕಷ್ಟದ ಅವಧಿಯಲ್ಲಿ ರೈತ ಕಾರ್ಮಿಕ ವಿರೋಧಿ – ಕಾರ್ಪೊರೇಟ್ ಕಂಪೆನಿಗಳ ಪರವಾದ ಕಾಯ್ದೆಗಳನ್ನು ತರಾತುರಿಯಲ್ಲಿ  ಜಾರಿಗೊಳಿಸುತ್ತಿದೆ. ಜನರ ಪ್ರತಿಭಟನೆ ಹತ್ತಿಕ್ಕಲು ಮತ್ತು ಅಧಿಕಾರದ ಗದ್ದುಗೆ ಗಟ್ಟಿಗೊಳಿಸಲು ಕೋಮು ಭಾವನೆ ಕೆರಳಿಸುತ್ತದೆ.


ಈ ಹಿನ್ನಲೆಯಲ್ಲಿ ದಿನಾಂಕ ಸೆ.28 ರಂದು ರೈತ ಸಂಘಟನೆಗಳ ಸಮನ್ವಯ ಸಮಿತಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗು ದಲಿತ ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ನ್ನು ಯಶಸ್ವಿಗೊಳಿಸಲು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಕರೆ ನೀಡುತ್ತದೆಂದು ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!